ಉಪರಾಷ್ಟ್ರಪತಿ ಚುನಾವಣೆ ಇಂದು ನಡೆಯಲಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಚುನಾವಣೆಯಲ್ಲಿ ಗುಪ್ತ ಮತದಾನ ಮಾಡಲಿದ್ದಾರೆ.
ಎನ್‌ಡಿಎಯಿಂದ ಜಗದೀಪ್ ಧನ್ಕರ್ ಅಭ್ಯರ್ಥಿಯಾಗಿದ್ದರೆ, ವಿಪಕ್ಷಗಳು ಕನ್ನಡತಿ ಮಾರ್ಗರೇಟ್ ಆಳ್ವರನ್ನು ಕಣಕ್ಕಿಳಿಸಿವೆ. ಮತದಾನ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಇಂದು ಸಂಜೆ ವೇಳೆ ಹೊಸ ಉಪರಾಷ್ಟ್ರಪತಿ ಯಾರು ಅನ್ನುವುದಕ್ಕೆ ಉತ್ತರ ಸಿಗಲಿದೆ. ಬಲಾಬಲದ ಲೆಕ್ಕಾಚಾರದಂತೆ ಎನ್‌ಡಿಎ ಅಭ್ಯರ್ಥಿ ಸುಲಭ ಗೆಲುವು ದಾಖಲಿಸುವ ನಿರೀಕ್ಷೆ ಇದೆ.
ಕನ್ನಡತಿಗೆ ಟಿಆರ್‌ಎಸ್ ಬೆಂಬಲ:
ಇನ್ನು, ಇಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕೆಲವು ಪಕ್ಷಗಳು ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್‌ಗೆ ಬೆಂಬಲ ಸೂಚಿಸುವುದಾಗಿ ಸ್ಪಷ್ಟಪಡಿಸಿವೆ.
ಆದರೆ, ತೆಲಂಗಾಣದ ಆಡಳಿತಾರೂಢ ಪಕ್ಷವಾದ ತೆಲಂಗಾಣ ರಾಷ್ಟ್ರಸಮಿತಿ ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮತ್ತು ಕನ್ನಡಿಗರಾದ ಮಾರ್ಗರೇಟ್ ಆಳ್ವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಇದರಿಂದ ಅವರಿಗಿದ್ದ ಬೆಂಬಲ ಹೆಚ್ಚಿದೆ. ಇತ್ತೀಚೆಗಷ್ಟೇ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಬಿಎಸ್‌ಪಿ ಹೇಳಿತ್ತು.