ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಬದಲಾಗಿದ್ದು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 101.94 ರೂ ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ 87.89 ರೂ ದಾಖಲಾಗಿದೆ.
ಇನ್ನು, ಮೈಸೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ 101.78 ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ ರೂ 87.75 ದಾಖಲಾಗಿದ್ದು, ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ರೂ 101.97 ಇದ್ದು, ಡೀಸೆಲ್ ಪ್ರತಿ ಲೀ. ರೂ 87.94 ದಾಖಲಾಗಿದೆ.
ಇಂದಿನ ಚಿನ್ನದ ಬೆಲೆ:
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ 250 ರೂಪಾಯಿಗಳು ಇಂದು ಏರಿಕೆ ಕಂಡಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ.ಇದ್ದದು 47,400 ರೂ. ಆಗಿದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಮೈಸೂರು, ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಬೆಂಗಳೂರು 47,400 ರೂ, ಮಂಗಳೂರು- 47,400ರೂ. ಮೈಸೂರು- 47,400 ರೂ. ಇದೆ.