ತಿಂಗಳ ಆರಂಭದಲ್ಲಿ ಈ ಬಾರಿಯೂ ಕೆಲವು ಬದಲಾವಣೆಗಳಿವೆ. ಗ್ಯಾಸ್ ಬೆಲೆಯನ್ನು ಹೊರತುಪಡಿಸಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ನೀತಿ ಅನ್ವಯವಾಗಲಿದೆ. ಹೌದು, ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, Bank of Barodaದ ಚೆಕ್ ಪಾವತಿ ನಿಯಮ ಬದಲಾಗಿದೆ. ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ₹ 5 ಲಕ್ಷ/ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗೆ SMS, ನೆಟ್ ಬ್ಯಾಂಕಿಂಗ್/ ಮೊಬೈಲ್ ಅಪ್ಲಿಕೇಶನ್ ಅಥಂಟಿಕೇಷನ್ ನೀಡಬೇಕಾಗುತ್ತದೆ.
ಇನ್ನು, ಈ ತಿಂಗಳಲ್ಲಿ (ಆಗಸ್ಟ್) ಮೊಹರಂ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಮುಂತಾದ ಹಲವು ಹಬ್ಬಗಳು ಇರುವುದರಿಂದ ಈ ಬಾರಿ ವಿವಿಧ ರಾಜ್ಯಗಳು ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಆಗಲಿದ್ದು, ಕರ್ನಾಟಕದಲ್ಲಿ ಕನಿಷ್ಠ 11 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿದೆ.