ದಾವಣಗೆರೆ: ನಿರುದ್ಯೋಗಿಗಳಿಗೆ ಮೊಬೈಲ್ ರಿಪೇರಿ, ಮೋಟಾರ್ ರೀವೈಂಡಿಂಗ್, ಗೃಹ ಎಲೆಕ್ಟ್ರಿಕಲ್ ವೈರಿಂಗ್ ಕುರಿತು ಉಚಿತ ತರಬೇತಿ

ದಾವಣಗೆರೆ:2022-23ನೇ ಸಾಲಿನ ಗ್ರಾಮಾಂತರ ಕೈಗಾರಿಕಾ ವಿಭಾಗ, ದಾವಣಗೆರೆ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರದ ವತಿಯಿಂದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಮೊಬೈಲ್ ರಿಪೇರಿ, ಮೋಟಾರ್ ರೀವೈಂಡಿಂಗ್, ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ…

Man Repairing Cellphone

ದಾವಣಗೆರೆ:2022-23ನೇ ಸಾಲಿನ ಗ್ರಾಮಾಂತರ ಕೈಗಾರಿಕಾ ವಿಭಾಗ, ದಾವಣಗೆರೆ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರದ ವತಿಯಿಂದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಮೊಬೈಲ್ ರಿಪೇರಿ, ಮೋಟಾರ್ ರೀವೈಂಡಿಂಗ್, ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ ವಿಷಯಗಳ ಕುರಿತು ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಕೆನರಾ ಬ್ಯಾಂಕ್‍ನ ಆರ್-ಸೆಟಿ ತರಬೇತಿ ಸಂಸ್ಥೆ ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿಯನ್ನು ನೀಡಲಾಗುವುದು ಹಾಗೂ ತರಬೇತಿಯ ನಂತರ ಪ್ರತಿ ಅಭ್ಯರ್ಥಿಗೆ ರೂ. 5,000 ಮೊತ್ತದ ಉಚಿತ ಉಪಕರಣಗಳ ಕಿಟ್‍ನ್ನು ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಆರ್‍ಸೆಟಿ ತರಬೇತಿ ಸಂಸ್ಥೆ, ಅಥವಾ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿಸಿ, ಕಚೇರಿ ಪಕ್ಕÀ, ದಾವಣಗೆರೆ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, 18 ರಿಂದ 45 ವರ್ಷದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ,

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9448929717, 9845691958, 7019980484, 9964111314. ಗೆ ಸಂಪರ್ಕಿಸಬಹುದು ಎಂದು ಜಿ.ಪಂ, ದಾವಣಗೆರೆ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.