ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿರುವ ಹಿನ್ನಲೆ ಇನ್ನು ಐದು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಕರಾವಳಿಯ ಬಹುತೇಕ ಕಡೆ ಇನ್ನು 5 ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಉತ್ತರ ಒಳನಾಡಿನಲ್ಲಿ ಕೆಲವಡೆ ಮಳೆಯಾಗಿದ್ದು, ಇನ್ನು 5 ದಿನ ಮಳೆಯಾಗುವ ಸಾಧ್ಯಾತೆಯಿದ್ದು, ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿದ್ದು, ಇನ್ನು ಮೂರು ದಿನ ಭಾರಿ ಮಳೆಯ ಮುನ್ಸೂಚನೆ ಇದೆ ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ಜಿಲ್ಲೆಗಳ ತಾಪಮಾನ :
ಬೆಂಗಳೂರು: 28-19, ಕೋಲಾರ: 30-2, ತುಮಕೂರು: 28-20, ಉಡುಪಿ: 28-24, ಕಾರವಾರ: 28-25, ಚಿತ್ರದುರ್ಗ: 29-20, ಹಾವೇರಿ: 28-21, ಬಳ್ಳಾರಿ: 33-23, ಗದಗ: 29-21, ಯಾದಗಿರಿ: 32-23, ವಿಜಯಪುರ: 30-21, ಬೀದರ್: 29-21, ಕಲಬುರಗಿ: 32-22, ಬಾಗಲಕೋಟೆ: 31-22, ಕೊಪ್ಪಳ: 31-22, ರಾಯಚೂರು: 33-23, ಚಿಕ್ಕಮಗಳೂರು: 25-18, ದಾವಣಗೆರೆ: 28-21, ಮಂಗಳೂರು: 28-24, ಶಿವಮೊಗ್ಗ: 27-21, ಬೆಳಗಾವಿ: 26-20, ಮೈಸೂರು: 28-20, ಮಂಡ್ಯ: 29-21, ಕೊಡಗು: 23-28, ರಾಮನಗರ: 29-21, ಹಾಸನ: 26-18, ಚಾಮರಾಜನಗರ: 28-20, ಚಿಕ್ಕಬಳ್ಳಾಪುರ: 29-19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.