ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ನಟಿ ಕರೀನಾ ಕಪೂರ್ ಮತ್ತು ಪತಿ ಸೈಫ್ ಅಲಿ ಖಾನ್ ಯುರೋಪ್ ಟ್ರಿಪ್ ಹೋಗಿದ್ದ ಫೋಟೋ ವೈರಲ್ ಆಗಿದ್ದು, ನಟಿ ಕರೀನಾ ಕಪೂರ್ ತಾವು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿಯನ್ನು ನಟಿ ಕರೀನಾ ಅಲ್ಲೆಗಳೆದಿದ್ದಾರೆ.
ಹೌದು, ನಟಿ ಕರೀನಾ ಕಪೂರ್ ಮತ್ತು ಪತಿ ಸೈಫ್ ಅಲಿ ಖಾನ್ ಯುರೋಪ್ ಟ್ರಿಪ್ ಹೋಗಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋ ನೋಡಿದ ನೆಟ್ಟಿಗರು, ಕರೀನಾ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಕರೀನಾ ಕಪೂರ್, “ಇದು ಪಾಸ್ತಾ ಮತ್ತು ವೈನ್ ಗೈಸ್. ನೀವು ಕೂಲ್ ಆಗಿರಿ.. ನಾನು ಗರ್ಭಿಣಿಯಲ್ಲ. ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.




