11 ಮದುವೆ, ಅಕ್ಕಪಕ್ಕದ ಬಿದಿಗಳಲ್ಲೇ ಸಂಸಾರ; 7 ಮಂದಿ ಪತ್ನಿಯರು ಒಂದೇ ಊರಿನವರು!

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬೇತಂಪೂಡಿಯ ವ್ಯಕ್ತಿಯೊಬ್ಬ 11 ಮಹಿಳೆಯರನ್ನು ಮದುವೆಯಾಗಿದ್ದು, ಅಡಪ ಶಿವಶಂಕರ್ ಬಾಬು ಎಂಬಾತ ಒಂದು ಡಜನ್ ನಷ್ಟು ಮಹಿಳೆಯರನ್ನು ಮದುವೆಯಾಗಿರುವ ಆಸಾಮಿ. ವಿಶೇಷವೆಂದರೆ, ಈತ ವರಿಸಿರುವ ಏಳು ಮಹಿಳೆಯರು ಹೈದರಾಬಾದ್‌ನ…

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬೇತಂಪೂಡಿಯ ವ್ಯಕ್ತಿಯೊಬ್ಬ 11 ಮಹಿಳೆಯರನ್ನು ಮದುವೆಯಾಗಿದ್ದು, ಅಡಪ ಶಿವಶಂಕರ್ ಬಾಬು ಎಂಬಾತ ಒಂದು ಡಜನ್ ನಷ್ಟು ಮಹಿಳೆಯರನ್ನು ಮದುವೆಯಾಗಿರುವ ಆಸಾಮಿ. ವಿಶೇಷವೆಂದರೆ, ಈತ ವರಿಸಿರುವ ಏಳು ಮಹಿಳೆಯರು ಹೈದರಾಬಾದ್‌ನ ಕೊಂಡಾಪುರದ ಅಕ್ಕಪಕ್ಕದ ನಿವಾಸಿಗಳೇ ಆಗಿದ್ದಾರೆ.

ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಶಿವಶಂಕರ್, ತನಗೆ ದೊಡ್ಡ ಸಂಸ್ಥೆಯಲ್ಲಿ ಕೆಲಸವಿದೆ ಎಂದು ಸುಳ್ಳು ಹೇಳಿ ಮದುವೆಗೆ ಒಪ್ಪಿಸುತ್ತಾನೆ. ಆಘಾತಕಾರಿ ಸಂಗತಿಯೆಂದರೆ, ಈತನನ್ನು ಮದ್ವೆಯಾಗಿರುವ ಹೆಚ್ಚಿನ ಮಹಿಳೆಯರು ಸುಶಿಕ್ಷಿತರಾಗಿದ್ದಾರೆ.

ಈತನೊಂದಿಗೆ ಮದ್ವೆಯಾಗಿ ಮೋಸ ಹೋಗಿರುವ ಮಹಿಳೆಯರ ಪೈಕಿ ಇಬ್ಬರು ಮಾಧ್ಯಮಗಳ ಮುಂದೆ ಆಗಮಿಸಿ, ತಮಗಾದ ವಂಚನೆ ಬಗ್ಗೆ ಬಹಿರಂಗಪಡಿಸಿದ್ದು, ಮದ್ವೆಯಾದ ಬಳಿಕ ಶಿವಶಂಕರ್ ಮಹಿಳೆಯರಿಂದ ಲಕ್ಷಗಟ್ಟಲೆ ಹಣ ಪಡೆದು ನಾಪತ್ತೆಯಾಗುತ್ತಾನೆ. ನಂತರ ಫೋನ್ ಸ್ವಿಚ್ ಆಫ್ ಮಾಡಿ, ಆ ಬಳಿಕ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

Vijayaprabha Mobile App free

ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನವನ್ನು ಶಿವಶಂಕರ್ ಗೆ ನೀಡಿರುವುದಾಗಿ ಇಬ್ಬರು ಮಹಿಳೆಯರು ಬಹಿರಂಗಪಡಿಸಿದ್ದು, ಶಿವಶಂಕರ್ ಆಂಧ್ರ ಪ್ರದೇಶದ ಸಚಿವರೊಬ್ಬರ ಸಂಬಂಧಿ ಎಂದು ಹೇಳಿ ವಂಚಿಸಿದ್ದಾನೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.