ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಯ ಹಿಂದೆ ಬೇನಾಮಿ ಆಸ್ತಿಯ ಕೈಚಳಕವಿದೆ ಎಂಬ ಮಾತುಗಳು ಕೇಳಿಬಂದಿದ್ದು, ಇದೀಗ ತನಿಖೆಯೂ ಚುರುಕುಗೊಂಡಿದ್ದು, ಒಂದೊಂದೆ ವಿಚಾರ ಬೆಳಕಿಗೆ ಬರುತ್ತಿದೆ.
ಹೌದು, ಚಂದ್ರಶೇಖರ ಗುರೂಜಿಯ ಸಹೋದರ ಅವರ ಹೆಸರಲ್ಲಿದ್ದ 8.20 ಎಕರೆ ಜಮೀನನ್ನು ಗುರೂಜಿಗೆ ಗಿಫ್ಟ್ ಆಗಿ ನೀಡಿದ್ದರು ಎಂದು ತಿಳಿದುಬಂದಿದೆ. ಆದರೆ ಇದು ಸಹೋದರನೇ ನೀಡಿದ್ದಾ ಅಥವಾ ಬೇನಾಮಿ ಆಸ್ತಿ ಸಕ್ರಮಗೊಳಿಸಲು ಅವರ ಹೆಸರಲ್ಲಿ ಗುರೂಜಿಯೇ ಆಸ್ತಿ ಖರೀದಿಸಿದ್ದಾ ಎಂಬುದು ತಿಳಿದುಬರಬೇಕಿದೆ.
ಇನ್ನು, ಗೋಕುಲ್ ಬಳಿ 5.11 ಎಕರೆ ಜಮೀನಿಗಾಗಿ ಗುರೂಜಿ ಹಾಗೂ ಸಹೋದರನ ಮಧ್ಯೆ ವೈಮನಸ್ಸು ಹುಟ್ಟಿಕೊಂಡಿತ್ತು, ಎನ್ನಲಾಗಿದ್ದು, ಬಾಗಲಕೋಟೆಯ ಷಣ್ಮುಖಪ್ಪ ಎಂಬುವವರ ಹೆಸರಿನಲ್ಲಿದ್ದ, 5.11 ಎಕರೆ ಜಮೀನನ್ನ ಸರಳವಾಸ್ತು ಸಿಬ್ಬಂದಿಗೆ ಮಾರಾಟ ಮಾಡಲಾಗಿದ್ದು, ಇದೇ ಜಮೀನು ವಿವಾದವೇ ಗುರೂಜಿ ಅವರ ಪ್ರಾಣಕ್ಕೆ ಸಂಚಕಾರ ತಂದಿತ್ತು ಎನ್ನಲಾಗ್ತಿದೆ.