ದೇವಾಲಯದಲ್ಲಿ ಮಾಂಸ, ಮದ್ಯ ಸೇವನೆ: ಅರ್ಚಕನ ಭೀಕರ ಹತ್ಯೆ

ದೇವಸ್ಥಾನದ ಆವರಣದಲ್ಲಿ ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಪಿಲಿಭಿತ್‌ನ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಜುಲೈ 7 ರಂದು…

Crime vijayaprabha news

ದೇವಸ್ಥಾನದ ಆವರಣದಲ್ಲಿ ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಪಿಲಿಭಿತ್‌ನ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಜುಲೈ 7 ರಂದು ಸ್ಥಳೀಯರಾದ ಸರ್ಜಿತ್ ಸಿಂಗ್ ಅವರು ನವಾಡಿಯಾ ಜಿತ್ನಿಯಾ ಗ್ರಾಮದ ಹೊರಗಿನ ಮಹಾದೇವ ದೇವಾಲಯದಲ್ಲಿ ವಾಸಿಸುತ್ತಿದ್ದ ಬಾಬಾ ರಿಷಿಗಿರಿ ಅಲಿಯಾಸ್ ಮದನ್‌ಲಾಲ್ ಬಗ್ಗೆ ಅಮರಿಯಾ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ವರದಿಯನ್ನು ದಾಖಲಿಸಿದಾಗ ಕೊಲೆಯಾಗಿರುವ ವಿಷಯವು ಮುನ್ನೆಲೆಗೆ ಬಂದಿದ್ದು, ಆತನ ಹುಡುಕಾಟ ನಡೆಸಿದಾಗ ಮೃತದೇಹವು ಕಾಲುವೆಯ ಬಳಿ ಸಿಕ್ಕಿದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.