ಲಂಡನ್: ಬಿಲಿಯನೇರ್ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್ ಮತ್ತು ಮಾಡೆಲ್ ಜೆರ್ರಿ ಹಾಲ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮುರ್ಡೋಕ್ ಮತ್ತು ಮಾಡೆಲ್ ಜೆರ್ರಿ ಹಾಲ್ 2016 ರಲ್ಲಿ ಲಂಡನ್‌ನಲ್ಲಿ ವಿವಾಹವಾಗಿದ್ದರು. ಇದೀಗ ಈ ದಂಪತಿಗಳು ಮದುವೆಯಾಗಿ ೬ ವರ್ಷಗಳು ಪೂರೈಸುವ ಒಳಗೆ ಬೇರೆಯಾಗಲು ನಿರ್ಧರಿಸಿದ್ದಾರೆ.
91 ವರ್ಷದ ಮುರ್ಡೋಕ್‌ಗೆ ಇದು ನಾಲ್ಕನೆ ಡಿವೋರ್ಸ್ ಆಗಿದ್ದು, ರೂಪರ್ಟ್ ಮುರ್ಡೋಕ್ ಪ್ರಸಿದ್ಧ ಮಾಧ್ಯಮಗ ಸಂಸ್ಥೆಗಳ ಒಡೆಯರಾಗಿದ್ದಾರೆ. ಅವರ ನ್ಯೂಸ್ ಕಾರ್ಪೊರೇಷನ್ ಮಾಧ್ಯಮ ಸಾಮ್ರಾಜ್ಯವು ಪ್ರತಿಷ್ಠಿತ ಫಾಕ್ಸ್ ನ್ಯೂಸ್, ಯುಎಸ್ ನ ವಾಲ್ ಸ್ಟ್ರೀಟ್ ಜರ್ನಲ್, ದಿ ಸನ್ ಮತ್ತು ದಿ ಟೈಮ್ಸ್ ಸೇರಿದಂತೆ ಪ್ರಮುಖ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.