ಬೆಂಗಳೂರು: ನಟ ದಿವಂಗತ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ‘ರಾಜಮಾರ್ತಾಂಡ’ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಚಿರು ಸಹೋದರ ಧ್ರುವ ಸರ್ಜಾ, ಸೆಪ್ಟೆಂಬರ್ 2ರಂದು ರಾಜಮಾರ್ತಾಂಡ ಚಿತ್ರ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದು, ಚಿರು ಡಬ್ಬಿಂಗ್ ಅನ್ನು ಧ್ರುವ ನಡೆಸಿಕೊಟ್ಟಿದ್ದಾರೆ ಎನ್ನುವುದು ವಿಶೇಷ.
ಇನ್ನು, ರಾಜಮಾರ್ತಾಂಡ ಸಿನಿಮಾವನ್ನು ಕೆ.ರಾಮನಾರಾಯಣ್ ನಿರ್ದೇಶಿಸಿದ್ದು, ಪ್ರಣವ್ ಗೌಡ, ಎನ್. ನಿವೇದಿತಾ ಮತ್ತು ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
🙏 RELEASING ON 02/09/2022 🙏 pic.twitter.com/X4ixtkbai6
— Dhruva Sarja (@DhruvaSarja) June 23, 2022