ಎಲ್ ಪಿಜಿ ಸಂಪರ್ಕ: ಗ್ಯಾಸ್ ಸಿಲಿಂಡರ್ ಠೇವಣಿಯಲ್ಲಿ ಭಾರಿ ಏರಿಕೆ; ಅವರ ಮೇಲೆ ತೀವ್ರ ಪರಿಣಾಮ!

ನೀವು ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸುತ್ತೀದ್ದೀರಾ? ಅಗಾದರೆ, ನಿಮಗೆ ಬ್ಯಾಡ್ ನ್ಯೂಸ್. ಹೌದು, ತೈಲ ಮಾರುಕಟ್ಟೆ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ಯಾಸ್ ಸಿಲಿಂಡರ್ ಠೇವಣಿ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ.…

Indane gas vijayaprabha

ನೀವು ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸುತ್ತೀದ್ದೀರಾ? ಅಗಾದರೆ, ನಿಮಗೆ ಬ್ಯಾಡ್ ನ್ಯೂಸ್. ಹೌದು, ತೈಲ ಮಾರುಕಟ್ಟೆ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ಯಾಸ್ ಸಿಲಿಂಡರ್ ಠೇವಣಿ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ. 14.2 ಕೆಜಿ ಗ್ಯಾಸ್ ಸಿಲಿಂಡರ್‌ನ ಠೇವಣಿ ಪ್ರಸ್ತುತ ರೂ. 1450 ಇದ್ದು, ಈಗ ಇದರ ಬೆಲೆ ರೂ. 2,200ಕ್ಕೆ ಏರಿಕೆಯಾಗಿದೆ. ಹಾಗೆಯೇ ಡಬಲ್ ಸಿಲಿಂಡರ್ ಸಂಪರ್ಕ ಪಡೆಯಬೇಕಾದರೆ.. ಇನ್ನೂ ಹೆಚ್ಚು ಕಟ್ಟಬೇಕು. ಅದೇ 5 ಕೆಜಿ ಸಿಲಿಂಡರ್ ವಿಚಾರಕ್ಕೆ ಬಂದರೆ.. ಒಟ್ಟು ಠೇವಣಿ ರೂ. 1150 ತಲುಪಿದೆ. 5 ಕೆಜಿ ಸಿಲಿಂಡರ್ ಇಲ್ಲಿಯವರೆಗೆ ಈ ಠೇವಣಿ ಮೊತ್ತ ರೂ. 800 ಇತ್ತು. ಹಾಗೆಯೇ ರೆಗ್ಯುಲೇಟರ್ ಗೆ ರೂ. 250 ಪಾವತಿಸಬೇಕು. ಇದುವರೆಗೆ ರೂ.150 ಪಾವತಿಸಿದರೆ ಸಾಕಿತ್ತು. ದರ ಏರಿಕೆ ನಾಳೆಯಿಂದ (ಜೂನ್ 16) ಜಾರಿಗೆ ಬರಲಿದೆ. ಇದರಿಂದ ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯಲು ಬಯಸುವವರ ಮೇಲೆ ಪ್ರಭಾವ ಬೀರಲಿದೆ. ಆದರೆ, ಉಜ್ವಲ ಯೋಜನೆಯಡಿ ಅನಿಲ ಸಂಪರ್ಕಗಳಿಗೆ ಈ ದರಗಳು ಅನ್ವಯಿಸುವುದಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ಹೇಳಿಕೊಂಡಿವೆ.

ಇನ್ನೊಂದೆಡೆ ಗೋವಾ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಸಿದ್ಧವಾಗಿದೆ. ಜೂನ್ ಅಂತ್ಯದಿಂದ ಈ ಪ್ರಯೋಜನ ದೊರೆಯಲಿದೆ. ಅರ್ಹ ಕುಟುಂಬಗಳ ಬ್ಯಾಂಕ್ ಖಾತೆಗೆ ಮೂರು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಣವನ್ನು ಸರ್ಕಾರ ಜಮಾ ಮಾಡುತ್ತದೆ. ಇದರಿಂದ ಸುಮಾರು 37,000 ಕುಟುಂಬಗಳು ಪ್ರಯೋಜನ ಪಡೆಯಲಿವೆ. ಇದರಿಂದ ಅವರಿಗೆ ಅನುಕೂಲವಾಗಲಿದೆ.

ಈ ಪ್ರಯೋಜನವು ಗೋವಾದಲ್ಲಿ ವಾಸಿಸುವವರಿಗೆ ಮಾತ್ರ ಲಭ್ಯವಿದೆ. ಅಲ್ಲದೆ ಅವರ ಕುಟುಂಬದ ಆದಾಯ ರೂ. 4 ಲಕ್ಷಕ್ಕಿಂತ ಕಡಿಮೆ ಇರಬೇಕು. ಕುಟುಂಬಗಳಿಗೆ ಸಾಮಾನ್ಯವಾಗಿ ವರ್ಷಕ್ಕೆ ಆರು ಸಿಲಿಂಡರ್‌ಗಳ ಅಗತ್ಯವಿದ್ದು, ಅದರಲ್ಲಿ ಮೂರು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಗೋವಿಂಗಗೌಡ ಹೇಳಿದ್ದಾರೆ . ಮೂರು ಸಿಲಿಂಡರ್‌ಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ರೂ. 36 ಕೋಟಿ ವೆಚ್ಚವಾಗಲಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.