ನೀವು ಎಸ್‌ಬಿಐ ಗ್ರಾಹಕರೇ? ಅಗಾದರೆ ನಿಮಗೆ ಗುಡ್ ನ್ಯೂಸ್!

ಎಸ್‌ಬಿಐ ಬಡ್ಡಿ ದರಗಳು: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಭ ಸುದ್ದಿ ನೀಡಿದ್ದು, ಗ್ರಾಹಕರಿಗೆ ಸಮಾಧಾನಕರ ಘೋಷಣೆ ಮಾಡಿದ್ದು, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಮೂಲಾಂಶಗಳವರೆಗೆ (ಬೇಸಿಸ್…

sbi-schemes-vijayaprabha-news

ಎಸ್‌ಬಿಐ ಬಡ್ಡಿ ದರಗಳು: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಭ ಸುದ್ದಿ ನೀಡಿದ್ದು, ಗ್ರಾಹಕರಿಗೆ ಸಮಾಧಾನಕರ ಘೋಷಣೆ ಮಾಡಿದ್ದು, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಮೂಲಾಂಶಗಳವರೆಗೆ (ಬೇಸಿಸ್ ಪಾಯಿಂಟ್) ಹೆಚ್ಚಿಸಲು ನಿರ್ಧರಿಸಿದೆ. ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಲು ಬಯಸುವವರಿಗೆ ಇದರಿಂದ ಅನುಕೂಲವಾಗಲಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಬಡ್ಡಿ ದರ ಈಗ ಲಭ್ಯವಿದ್ದು, ಹೆಚ್ಚು ಆದಾಯ ಸಿಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಎಸ್ ಬಿಐ ಕೂಡ ಈಗ ಬಡ್ಡಿ ದರವನ್ನು ಏರಿಸಿದೆ. ಆದರೆ, ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ಮಾತ್ರವಲ್ಲದೆ ಸಾಲದ ದರಗಳನ್ನೂ ಕೂಡ ಹೆಚ್ಚಿಸುತ್ತಿವೆ.

ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಅವಧಿ (Term) ಠೇವಣಿಗಳ ಮೇಲಿನ ಬಡ್ಡಿ ದರವು 2.9 ಪ್ರತಿಶತದಿಂದ ಪ್ರಾರಂಭವಾಗಲಿದ್ದು, ಗರಿಷ್ಠ 5.5% ಬಡ್ಡಿ ದರವನ್ನು ಸಹ ಪಡೆಯಬಹುದು. ರೂ. 2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳಿಗೆ ಇದು ಅನ್ವಯಿಸುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ಸಿಗುತ್ತದೆ. 0.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಇವರಿಗೆ ಕನಿಷ್ಠ ಬಡ್ಡಿ ದರವು 3.4 ಪ್ರತಿಶತ ಹಾಗು ಗರಿಷ್ಠ 6.3 ಪ್ರತಿಶತದಷ್ಟು ಬಡ್ಡಿದರವನ್ನು ಹೊಂದಬಹುದು.

7 ರಿಂದ 45 ದಿನಗಳ ಸ್ಥಿರ ಠೇವಣಿಗಳು 2.9% ಬಡ್ಡಿದರವನ್ನು ಹೊಂದಿರುತ್ತವೆ. 46-ದಿನದಿಂದ 179-ದಿನಗಳ ಅವಧಿಯ ಠೇವಣಿಗಳ ಮೇಲೆ 3.9 ಶೇಕಡಾ ಬಡ್ಡಿ ಇದೆ. ನೀವು 180 ದಿನಗಳಿಂದ 210 ದಿನಗಳವರೆಗೆ ಠೇವಣಿಗಳ ಮೇಲೆ 4.4% ಬಡ್ಡಿಯನ್ನು ಪಡೆಯಬಹುದು. ಅವಧಿಯ (Term) ಠೇವಣಿಗಳ ಮೇಲಿನ ಬಡ್ಡಿ ದರವು 211 ದಿನಗಳಿಂದ ಒಂದು ವರ್ಷಕ್ಕೆ 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದ್ದು, 4.6 ರಷ್ಟು ಬಡ್ಡಿ ಬರುತ್ತಿದೆ. ಒಂದು ವರ್ಷದಿಂದ ಎರಡು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವೂ 20 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿದ್ದು, 5.3 ರಷ್ಟು ಬಡ್ಡಿ ಬರುತ್ತದೆ. 2 ರಿಂದ 3 ವರ್ಷಗಳ ಠೇವಣಿಗಳ ಮೇಲಿನ ಬಡ್ಡಿ ದರವು 15 ಬೇಸಿಸ್ ಪಾಯಿಂಟ್‌ ಗಳಿಂದ 5.35 ಶೇಕಡಾಕ್ಕೆ ಏರಿದೆ. 3 ರಿಂದ 5 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡಾ 5.45 ಮತ್ತು 5 ರಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಇದು 5.5 ಶೇಕಡಾ ಬಡ್ಡಿ ಪಡೆಯಬಹುದು. ಎಸ್‌ಬಿಐ ಪಿಂಚಣಿದಾರರು ಮತ್ತು ಹಿರಿಯ ನಾಗರಿಕರು ಹೆಚ್ಚುವರಿ 0.5 ಶೇಕಡಾ ಬಡ್ಡಿಯನ್ನು ಪಡೆಯಲಿದ್ದು, ಇದು ಎಲ್ಲಾ ಅವಧಿಗಳಿಗೂ ಅನ್ವಯಿಸುತ್ತದೆ.

Vijayaprabha Mobile App free

ಸೀನಿಯರ್ ಸಿಟಿಜನ್ಸ್‌ ಗೆ 211 ದಿನಗಳಿಂದ ವರ್ಷದೊಳಗೆ ಎಫ್‌ಡಿಗಳ ಮೇಲೆ 5.1 ಶೇಕಡಾ ಬಡ್ಡಿ ಬರುತ್ತದೆ. ಒಂದು ವರ್ಷದಿಂದ ಎರಡು ವರ್ಷಕ್ಕೆ ಎಫ್‌ಡಿ ಮೇಲೆ 5.8 ಶೇಕಡಾ ಬಡ್ಡಿ ಪಡೆಯಬಹುದು. ಎರಡು ವರ್ಷದಿಂದ ಮೂರೂ ವರ್ಷದವರೆಗೆ ಎಫ್‌ಡಿಯಲ್ಲಿ 5.85 ಶೇಕಡಾ ಬಡ್ಡಿ ಇದೆ. 3 ರಿಂದ 5 ವರ್ಷದ ಟರ್ಮ್‌ನಲ್ಲಿನ ಎಫ್‌ಡಿಗಳಲ್ಲಿ 5.95 ಶೇಕಡಾ ಬಡ್ಡಿ ಬರುತ್ತಿದೆ. ಐದರಿಂದ ಹತ್ತು ವರ್ಷದೊಳಗೆ ಎಫ್‌ಡಿಗಳ ಮೇಲೆ 6.3 ಶೇಕಡಾ ಬಡ್ಡಿ ಮಾಡಬಹುದು. ಇನ್ನು, ಹೊಸ ಠೇವಣಿಗಳಿಗೆ, ಹಾಗೆಯೇ ರೆನ್ಯೂವಲ್ ಫಿಕ್ಸ್‌ಡ್ ಠೇವಣಿಗಳಿಗೆ ಹೊಸ ಬಡ್ಡಿ ದರಗಳು ಅನ್ವಹಿಸುತ್ತವೆ ತಿಳಿಸಿದ್ದು, ಕೊನೆಯದಾಗಿ 2022 ಫೆಬ್ರವರಿ ತಿಂಗಳಿನಲ್ಲಿ ಎಫ್‌ಡಿ ರೇಟ್‌ಗಳನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.