Jeevan Tarun Policy: LIC ಈ ಪಾಲಿಸಿಯಿಂದ ಮಕ್ಕಳ ಶಿಕ್ಷಣ, ಮದುವೆಗೆ ಬರೋಬ್ಬರಿ 7 ಲಕ್ಷ ರೂ!

Vijayaprabha

Jeevan Tarun Policy: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅನೇಕ ಹೂಡಿಕೆ ಆಯ್ಕೆಗಳು ಲಭ್ಯವಿದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಅಂಚೆ ಕಚೇರಿ ಯೋಜನೆಗಳು, ಜೀವ ವಿಮಾ ನಿಗಮ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರಲ್ಲಿ LIC ಬಹಳ ಜನಪ್ರಿಯವಾಗಿದೆ.

ಇದನ್ನು ಓದಿ: ಆಹಾರ ಇಲಾಖೆಯಲ್ಲಿ 386 ಹುದ್ದೆಗಳು; ಅರ್ಜಿ ಸಲ್ಲಿಸಲು ಮೇ 17 ಕೊನೆ ದಿನ

ಎಲ್ಐಸಿ (LIC) ದೇಶದ ಪ್ರತಿಯೊಂದು ವಿಭಾಗಕ್ಕೂ ಹಲವು ವಿಭಿನ್ನ ಯೋಜನೆಗಳನ್ನು ತರುತ್ತಿದ್ದು, ಕೆಲವು ಯೋಜನೆಗಳನ್ನು ವಿಶೇಷವಾಗಿ ಮಕ್ಕಳಿಗಾಗಿ ರೂಪಿಸಲಾಗಿದೆ. ಇದನ್ನು ಖರೀದಿಸುವ ಮೂಲಕ, ನಿಮ್ಮ ಮಗುವಿನ ಶೈಕ್ಷಣಿಕ ಒತ್ತಡವನ್ನು ನಿವಾರಿಸಬಹುದು. ಈ ಯೋಜನೆಯ ಹೆಸರು LIC ಜೀವನ್ ತರುಣ್ ಪಾಲಿಸಿ (Jeevan Tarun Policy). ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಎಷ್ಟು ಲಾಭ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ.

LIC ಜೀವನ್ ತರುಣ್ ಪಾಲಿಸಿ; ಮಗುವಿಗೆ ಎಷ್ಟು ವಯಸ್ಸಾಗಿರಬೇಕು?

ಜೀವನ್ ತರುಣ್ ಪಾಲಿಸಿ

ಎಲ್ಐಸಿ ಜೀವನ್ ತರುಣ್ ಪಾಲಿಸಿ  (Jeevan Tarun Policy) ಯಲ್ಲಿ ಹೂಡಿಕೆ ಮಾಡಲು, ಮಗುವಿನ ಕನಿಷ್ಠ ವಯಸ್ಸು 3 ತಿಂಗಳು ಮತ್ತು ಗರಿಷ್ಠ 12 ವರ್ಷಗಳು ಇರಬೇಕು. ಈ ಯೋಜನೆಯಡಿಯಲ್ಲಿ ಮಗುವಿಗೆ 20 ವರ್ಷ ವಯಸ್ಸಾಗುವವರೆಗೆ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಇದರ ನಂತರ 5 ವರ್ಷಗಳ ಅವಧಿಗೆ ಯಾವುದೇ ಹೂಡಿಕೆ ಇರುವುದಿಲ್ಲ. ಮಗು 25 ವರ್ಷಗಳನ್ನು ಪೂರೈಸಿದ ನಂತರ ಸಂಪೂರ್ಣ ಮೊತ್ತವನ್ನು ಕ್ಲೈಮ್ ಮಾಡಬಹುದು. ಇದರಿಂದ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸ (Child Education), ಮದುವೆ (Marriage) ಖರ್ಚಿನ ಯಾವುದೇ ಟೆನ್ಷನ್ ಇರುವುದಿಲ್ಲ.

ಇದನ್ನು ಓದಿ: Udyog Aadhar: ಆಧಾರ್ ಗೊತ್ತು.. ಇದೇನು ಉದ್ಯೋಗ ಆಧಾರ್? ಪ್ರಯೋಜನಗಳೇನು..ಅರ್ಜಿ ಸಲ್ಲಿಸುವುದು ಹೇಗೆ?

LIC ಜೀವನ್ ತರುಣ್ ಪಾಲಿಸಿ ಕನಿಷ್ಠ ವಿಮಾ ಮೊತ್ತ ಎಷ್ಟು:

ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಕನಿಷ್ಟ ರೂ.75,000 ವಿಮಾ (Insurance) ಮೊತ್ತದ ಲಾಭವನ್ನು ಪಡೆಯಬಹುದು. ಇನ್ನು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಯಡಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದಾಗಿದ್ದು, ಜೀವನ್ ತರುಣ್ ಪಾಲಿಸಿಯೂ ಸೀಮಿತ ಪಾವತಿ ಯೋಜನೆ (Limited Payment Plan) ಯಾಗಿದೆ ಎಂಬುದನ್ನು ಗಮನಿಸಬೇಕು.

ಇದನ್ನು ಓದಿ: ಪ್ರತಿ ತಿಂಗಳು ನಿಮಗೆ ಹಣ ಬೇಕೇ? ಈ 7 ಅದ್ಭುತ ಯೋಜನೆಗಳು ನಿಮಗಾಗಿ!

LIC ಜೀವನ್ ತರುಣ್ ಪಾಲಿಸಿಯಲ್ಲಿ ಮೆಚ್ಯೂರಿಟಿ ಸಮಯದಲ್ಲಿ ಎಷ್ಟು ಮೊತ್ತ..

ಒಂದು ವೇಳೆ ಒಬ್ಬ ವ್ಯಕ್ತಿಯು 12 ನೇ ವಯಸ್ಸಿನಲ್ಲಿ ಮಗುವಿಗೆ ತನ್ನ ಈ ಪಾಲಿಸಿಯನ್ನು ಖರೀದಿಸಿದರೆ ಮತ್ತು ಪ್ರತಿದಿನ ರೂ.150 ರ ಸಣ್ಣ ಮೊತ್ತವನ್ನು ಪಾವತಿಸಿದರೆ, ವಾರ್ಷಿಕ ಪ್ರೀಮಿಯಂ ಸುಮಾರು ರೂ.54,000 ಆಗಿರುತ್ತದೆ. ಈ ಸಂದರ್ಭದಲ್ಲಿ 8 ವರ್ಷಗಳಲ್ಲಿ ಒಟ್ಟು 4.32 ಲಕ್ಷ ರೂ ಆಗುತ್ತದೆ . ಇದರ ಮೇಲೆ ಅವರು ರೂ.2.47 ಲಕ್ಷವನ್ನು ಬೋನಸ್ ಆಗಿ ಪಡೆಯುತ್ತಾರೆ. ಅಂದರೆ ಈ ಯೋಜನೆಯಡಿ ತನ್ನ 25ನೇ ವಯಸ್ಸಿನಲ್ಲಿ ಸುಮಾರು 7 ಲಕ್ಷ ರೂ ಪಡೆಯಬಹುದು.

ಇದನ್ನು ಓದಿ: ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು; ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆ ದಿನ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version