Ration card: ಗೃಹಲಕ್ಷ್ಮೀ ಯೋಜನೆ ಜಾರಿಗೊಂಡ ಬಳಿಕ ಒಂದೇ ಕುಟುಂಬದಲ್ಲಿದ್ದ ಅತ್ತೆ-ಸೊಸೆಯರು ತಾವು ಬೇರೆ ಬೇರೆ ಆಗಿದ್ದೇವೆ ಎಂದು ಪ್ರತ್ಯೇಕ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಸಂಬಂಧ ಅತ್ತೆ-ಸೊಸೆಯರಿಗೆ ಸರ್ಕಾರ ಶಾಕ್ ನೀಡಿದೆ. ಹೌದು, ಈ ವಿಚಾರ ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು, ಅಂತಹ ಪಡಿತರ ಚೀಟಿಗಳಿಗೆ ಅನುಮತಿ ನೀಡದೇ ಬ್ರೇಕ್ ಹಾಕುವುದಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಇಂದು ಏಕಾದಶಿಯಂದು ಈ ರಾಶಿಗಳಿಗೆ ವಿಷ್ಣು ದೇವರ ಆಶೀರ್ವಾದ..!
ration card: ಪಡಿತರ ಚೀಟಿದಾರರ ಮೇಲೆ ಹದ್ದಿನ ಕಣ್ಣು
ಇನ್ನು, ತೆರಿಗೆ ಪಾವತಿದಾರರು, ಒಂದೇ ಮನೆಯಲ್ಲಿರುವ ತಂದೆ-ತಾಯಿ ಒಂದು ಕಾರ್ಡ್, ಮಗ-ಸೊಸೆ ಮತ್ತೊಂದು ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದು, ಇಂತಹ ಸಾಕಷ್ಟು ಅರ್ಜಿಗಳು ತಿರಸ್ಕೃತಗೊಂಡಿದ್ದು, ಸರಕಾರಿ ಉದ್ಯೋಗ ಪಡೆದ ಮೇಲೆ ಕಾರ್ಡ್ ಬದಲಾವಣೆ ಮಾಡದೇ ಪಡಿತರ ಪಡೆಯುತ್ತಿವವರೂ ಇದ್ದಾರೆ.
ಆಹಾರ ಇಲಾಖೆ ಇಂತಹ ಅನರ್ಹ ಪಡಿತರ ಚೀಟಿದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದರೂ ಕೆಲವರು ಕಳ್ಳದಾರಿಯಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಮುಂದಾಗುತ್ತಿದ್ದು,ಇಂತಹವರಿಗೆ ಇಲಾಖೆ ಇನ್ನೂ ಚುರುಕು ಮುಟ್ಟಿಸಲಿದೆ.
ಇದನ್ನೂ ಓದಿ:ಡ್ರೈವಿಂಗ್ ಲೈಸೆನ್ಸ್ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಪಡಿತರ ಚೀಟಿ ತಿದ್ದುಪಡೆ; ಜನರಿಗೆ ಶಾಕ್ ಕೊಟ್ಟ ಸರ್ಕಾರ!!
ಪಡಿತರ ಚೀಟಿ ತಿದ್ದುಪಡಿಗಾಗಿ ನಿತ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಅಲೆದಾಡುವ ಮಂದಿಗೆ ಆಹಾರ ಇಲಾಖೆಯು ಕೇವಲ ಮೂರು ದಿನಗಳ ಕಾಲಾವಕಾಶ ಕಲ್ಪಿಸಿ, ಅರ್ಜಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿ ಅಲೆದಾಡುವಂತೆ ಮಾಡಿದೆ.
ಹೌದು, ತಿದ್ದುಪಡಿಗೆ ಕೇವಲ ಮೂರು ದಿನಗಳು ಮಾತ್ರ ಅವಕಾಶ ಇರುವ ಕಾರಣ ರೈತರು, ಕೂಲಿಕಾರ್ಮಿಕರಿಗೆ ಅರ್ಜಿ ಸಲ್ಲಿಕೆ ಕಷ್ಟವಾಗಲಿದ್ದು, ಒಮ್ಮೆಲೆ ಅರ್ಜಿದಾರರು ಗ್ರಾಹಕ ಸೇವಾ ಕೇಂದ್ರಗಳಿಗೆ ದುಂಬಾಲು ಬೀಳುವ ಸ್ಥಿತಿ ನಿರ್ಮಾಣವಾಗಲಿದ್ದು, ಸರ್ವರ್ ಸಮಸ್ಯೆಯೂ ಜನರನ್ನು ಕಾಡಬಹುದಾಗಿದೆ.
ಇದನ್ನೂ ಓದಿ: ಅಕ್ಟೋಬರ್ 2ನೇ ವಾರದಲ್ಲಿ ಗೃಹಲಕ್ಷ್ಮೀ 2ನೇ ಕಂತು; ಇವರಿಗೆ 2000 ರೂಪಾಯಿ ಸಿಗೋದು ಡೌಟು..!
ಹೊಸ ರೇಷನ್ ಕಾರ್ಡ್ ಪಡೆಯಲು ನೀವು ಅರ್ಹರಾ ಚೆಕ್ ಮಾಡಿ!
ಮೂಲಗಳ ಪ್ರಕಾರ ಇನ್ನೇನು ಹೊಸ ಬಿಪಿಎಲ್ ಕಾರ್ಡ್ಗಳ ಅರ್ಜಿ ಇನ್ನೇನು ಆರಂಭಿಸಬಹುದು ಎನ್ನಲಾಗಿದ್ದು, ಹೊಸ ರೇಷನ್ ಕಾರ್ಡ್ ಪಡೆಯಲು ನೀವು ಈ ಮಾನದಂಡಗಳನ್ನು ಗಮನಿಸಿ
- ಜಿಎಸ್ಟಿ, ಐಟಿ ರಿಟರ್ನ್ ಪಾವತಿದಾರರಾಗಿರಬಾರದು.
- ಗ್ರಾಮೀಣ ಭಾಗದಲ್ಲಿ 3 ಹೆಕ್ಕೇರ್ಗಿಂತ ಹೆಚ್ಚು ಭೂಮಿ ಹೊಂದಿರಬಾರದು.
- ನಗರದಲ್ಲಿ 1000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |