Gruhalakshmi: ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ. ಈ ಬಗ್ಗೆ ಇದೀಗ ಅಪ್ಡೇಟ್ ಒಂದು ಸಿಕ್ಕಿದೆ. ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಅಕ್ಟೋಬರ್ ತಿಂಗಳ 2ನೇ ವಾರದಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಈ ಜಿಲ್ಲೆಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
ಇನ್ನು ಮೊದಲ ಕಂತಿನ ಹಣ ಜಮಾ ಆಗದೇ ಇರುವವರು ತಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ಸರಿಯಾಗಿ ಮಾಡಿಸಿಕೊಳ್ಳಬೇಕು. ಬಳಿಕ ಎರಡೂ ಕಂತಿನ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಮೂಲಗಳು ಹೇಳಿವೆ.
Gruhalakshmi: ಗೃಹಲಕ್ಷ್ಮೀ 2000 ರೂ ಬಂದಿಲ್ವ ನಿಮ್ಮ ಖಾತೆಗೆ?
ಅರ್ಜಿ ಹಾಕಿದರೂ ಗೃಹಲಕ್ಷ್ಮೀ ಯೋಜನೆಯ ಹಣ ನಿಮಗಿನ್ನೂ ಬಂದಿಲ್ವಾ? ಯೋಜನೆಗೆ ಚಾಲನೆ ಕೊಟ್ಟು 2 ತಿಂಗಳಾಗುತ್ತಾ ಬಂತು. 92 ಲಕ್ಷ ಅರ್ಹರಿಗೆಯೋಜನೆ ಮೂಲಕ ಹಣ ತಲುಪಿದೆ. ಇನ್ನೂ 18 ಲಕ್ಷದಷ್ಟು ಮನೆಯೊಡತಿಯರಿಗೆ ಇನ್ನೂ ಹಣ ಬಂದಿಲ್ಲ. ಇದಕ್ಕೆ ಕಾರಣ ಅರ್ಜಿ ಸಲ್ಲಿಕೆ ಮಾಡುವುದಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ. ಈ 3 ಕೂಡ ಒಂದೇ ಆಗಿರಬೇಕು.
ಇದನ್ನೂ ಓದಿ:ರೈತರಿಗೆ ಬಿಗ್ ಶಾಕ್, ಪಿಎಂ ಕಿಸಾನ್‌ನಿಂದ 1.72 ಕೋಟಿ ರೈತರ ಹೆಸರು ಡಿಲೀಟ್; ನೀವು ಪಟ್ಟಿಯಲ್ಲಿದ್ದಾರಾ?
Gruhalakshmi: ಗೃಹ ಲಕ್ಷ್ಮೀ ಯೋಜನೆಗೆ 2000 ರೂಪಾಯಿ ಸಿಗೋದು ಡೌಟು..!
ಗೃಹ ಲಕ್ಷ್ಮೀ ಅಡಿ ಕುಟುಂಬದ ಯಜಮಾನಿಗೆ ₹2000 ನೀಡುವ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ನಿರೀಕ್ಷೆ ಮಹಿಳೆಯರಿಗಿದ್ದು, 1ನೇ ಕಂತು ಪಾವತಿಯಾದವರಿಗೆ ಮಾತ್ರ 2ನೇ ಕಂತಿನ ದುಡ್ಡು ಸಿಗಲಿದೆ ಎಂದು ಹೇಳಲಾಗಿದೆ. ಕೆಲ ಕಾರಣಗಳಿಂದ ಹಲವು ಮಹಿಳೆಯರಿಗೆ ಮೊದಲ ಕಂತು ಜಮೆಯಾಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಇಂದು ಮೇಷ, ಕರ್ಕಾಟಕ ಸೇರಿದಂತೆ ಈ ರಾಶಿಯವರಿಗೆ ಶಿವನ ಕೃಪೆ..!
ಹೌದು, ಗೃಹ ಲಕ್ಷ್ಮೀ ಯೋಜನೆ ನೋದಂಣಿಗೆ ನಿರಂತರ ಪ್ರಕ್ರಿಯೆ ಇದ್ದರೂ ನೋಂದಣಿ ಆಗುತ್ತಿಲ್ಲ. ಇನ್ನೊಂದಡೆ ರೇಷನ್ ಕಾರ್ಡ್ನಲ್ಲಿ ಮಹಿಳೆಯರ ಹೆಸರು ತಿದ್ದುಪಡಿಗೆ ಕಾಲಾವಕಾಶ ನೀಡಿದರು, ಸರ್ವರ್ ಸಮಸ್ಯೆ ಹೆಚ್ಚಾಗುತ್ತಿದೆ.
ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಕೇಂದ್ರಕ್ಕೆ ಪರಿಷ್ಕೃತ ಪಟ್ಟಿಯನ್ನು ಕಳುಹಿಸಿಲ್ಲ ಎನ್ನಲಾಗಿದ್ದು, ಹೀಗಾಗಿ ಹೊಸ, ಪರಿಷ್ಕೃತ ಮತ್ತು ಕಳೆದ ಬಾರಿ ಹಣ ಜಮೆಯಾಗದ ಖಾತೆಗಳಿಗೆ ಈ ಬಾರಿಯೂ ಹಣ ಜಮೆಯಾಗುವುದು ಸಂದೇಹ ಎಂದು ಹೇಳಲಾಗಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |