Rajinikanth threat: ಖ್ಯಾತ ತಮಿಳು ಪತ್ರಕರ್ತ ಮತ್ತು ಚಲನಚಿತ್ರ ವಿಮರ್ಶಕ, ಚೆಯ್ಯಾರು ಬಾಲು ಅವರು ಸೂಪರ್ ಸ್ಟಾರ್ ನಟ ರಜನಿಕಾಂತ್ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದು, ಖ್ಯಾತ ನಟಿಯ ಮನೆಯ ತೆರಳಿ ಬೆದರಿಕೆ ಹಾಕಿದ್ದರು ಎಂಬ ಹೇಳಿಕೆ ಮಹತ್ವದ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಐಪಿಎಲ್ ಮಾದರಿಯಲ್ಲಿ ಬೆಂಗಳೂರು ಕಂಬಳ; ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ, ಉಪೇಂದ್ರ ಸೇರಿದಂತೆ ಸ್ಟಾರ್ ಕಲಾವಿದರ ಸಾಥ್
ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಧನುಷ್ ವಿಚ್ಛೇದನ

ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಮತ್ತು ಅಳಿಯ ಧನುಷ್ ಕಳೆದ ವರ್ಷದ ಜನವರಿಯಲ್ಲಿ ತಾವು ಕಾನೂನುಬದ್ಧವಾಗಿ ಪ್ರತ್ಯೇಕವಾಗುವುದಾಗಿ ಘೋಷಿಸಿದ್ದರು. ಮದುವೆಯಾಗಿ 18 ವರ್ಷಗಳಾದ ಬಳಿಕ ಈ ಜೋಡಿ ವಿಚ್ಛೇದನ ಘೋಷಿಸಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ಇದನ್ನೂ ಓದಿ: ವ್ಯಾಪಾರ ಕ್ಷೇತ್ರದಲ್ಲಿ ಮಿಂಚುತ್ತಿರುವ ಶಾರುಖ್ ಪತ್ನಿ, ಗೌರಿ ಖಾನ್ ಅವರ ಆಸ್ತಿ ಎಷ್ಟು ಕೋಟಿ ಗೊತ್ತಾ?
ಆದರೆ, ರಜನಿಕಾಂತ್ ಮತ್ತು ಧನುಷ್ ಅವರ ಕುಟುಂಬವು ಬೇರ್ಪಟ್ಟ ದಂಪತಿಗಳನ್ನು ಮತ್ತೆ ಒಟ್ಟಿಗೆ ಸೇರಿಸಲು ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಸಮಯ ಇನ್ನೂ ಕೂಡಿ ಬಂದಿಲ್ಲ. ಇದರ ನಡುವೆ ಧನುಷ್ ಮತ್ತು ಐಶ್ವರ್ಯ ರಜಿನಿಕಾಂತ್ ವಿಚ್ಛೇದನದ ಹಿಂದಿನ ನಿಖರವಾದ ಕಾರಣವು ನಿಗೂಢವಾಗಿ ಉಳಿದಿದೆ.
ಧನುಷ್ ಮತ್ತು ಐಶ್ವರ್ಯಾ ಅವರ ಸಂಬಂಧದಲ್ಲಿ ಈ ಖ್ಯಾತ ನಟಿ ಬಂದಿದ್ದೆ ಸಂಸಾರದಲ್ಲಿ ಬಿರುಕು ಮೂಡಲು ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತಮಿಳು ಪತ್ರಕರ್ತ ಮತ್ತು ಚಲನಚಿತ್ರ ವಿಮರ್ಶಕ ಚೆಯ್ಯಾರು ಬಾಲು ಎಂಬುವರು ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಆ ನಟಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ಸಂಬಂಧದಲ್ಲಿ ಖ್ಯಾತ ನಟಿ ಎಂಟ್ರಿ

ಹೌದು, ಚೆಯ್ಯಾರು ಬಾಲು ಅವರು ನಟಿಯ ಹೆಸರನ್ನು ಪಡಿಸಿದ್ದಾರೆ. ಆ ನಟಿ ಬೇರೆ ಯಾರು ಅಲ್ಲ, ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟಿ ಅಮಲಾ ಪೌಲ್, ಸದ್ಯ ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಬದಲಾಗದಿದ್ದರೆ ಈ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ; ಶಾಕಿಂಗ್ ಹೇಳಿಕೆ ನೀಡಿದ ಐಶ್ವರ್ಯ ಲಕ್ಷ್ಮಿ
ಈ ನಟಿ ಈ ಹಿಂದೆ ನಟ ಧನುಷ್ ಜೊತೆ ತುಂಬಾ ಕ್ಲೋಸ್ ಆಗಿದ್ದರು ಎನ್ನಲಾಗಿದ್ದು, ಆ ಸಮಯದಲ್ಲಿ, ಇಬ್ಬರೂ ಒಟ್ಟಿಗೆ ನಟಿಸಿದ ವೆಲೈಲ್ಲೈ ಪಟ್ಟದಾರಿ ಚಿತ್ರದೊಂದಿಗೆ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಇದಲ್ಲದೇ ಇವರಿಬ್ಬರ ಸಂಬಂಧದ ಬಗ್ಗೆ ಕಾಲಿವುಡ್ ನಲ್ಲಿ ಭಾರೀ ಚರ್ಚೆ ನಡೆದಿದೆ.
Rajinikanth: ಅಮಲಾ ಪಾಲ್ ಗೆ ತಲೈವಾ ವಾರ್ನಿಂಗ್

ಇದೇ ವಿಚಾರವಾಗಿ ಧನುಷ್ ಮತ್ತು ಅಮಲಾ ನಡುವಿನ ಸಂಬಂಧ ವಿಚಾರ ತಿಳಿದಿದ್ದ ಧನುಷ್ ಅವರ ಮಾವ ರಜನಿಕಾಂತ್ ಅವರು ಅಮಲಾ ಪೌಲ್ ಅವರ ಮನೆಗೆ ಹೋಗಿ ತಮ್ಮ ಮಗಳ ಸಂಸಾರದಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದು,‘ತನ್ನ ಅಳಿಯ ಧನುಷ್ ಜೊತೆಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ’ಎಂದು ರಜನೀಕಾಂತ್ ಅಮಲಾಗೆ ಬೆದರಿಕೆ ಹಾಕಿದ್ದರಂತೆ ಎಂದು ಖ್ಯಾತ ಪತ್ರಕರ್ತ ಚೆಯ್ಯಾರು ಬಾಲು ಹೇಳಿಕೊಂಡಿದ್ದಾರೆ.
ಫಿದಾ ಬ್ಯೂಟಿಗೆ ಒಲಿದ ಅದೃಷ್ಟ , ಅಮಿರ್ ಖಾನ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ!
ಈ ಘಟನೆಯ ನಂತರ ತಮಿಳುನಾಡಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ನಟಿ ಅಮಲಾ ಪಾಲ್ ಕೇರಳಕ್ಕೆ ತೆರಳಿದ್ದಾರೆ ಎಂದು ತ ಪತ್ರಕರ್ತ ಚೆಯ್ಯಾರು ಬಾಲು ಹೇಳಿಕೊಂಡಿದ್ದಾರೆ.
ಆದರೆ ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ. ಇದೆಲ್ಲವೂ ವದಂತಿ ಎಂದು ಕೆಲವರು ತಳ್ಳಿ ಹಾಕುತ್ತಿದ್ದಾರೆ. ಅದೇನೇ ಇರಲಿ, ಈಗ ಪತ್ರಕರ್ತೆ ಮಾಡಿರುವ ಕಾಮೆಂಟ್‌ಗಳು ಕಾಲಿವುಡ್‌ನಲ್ಲಿ ವೈರಲ್ ಆಗುತ್ತಿವೆ. ಇದೀಗ ಈ ಸುದ್ದಿ ಕಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |