Guarantee Scheme: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡುವ ಆಶ್ವಾಸನೆಯನ್ನು ನೀಡಿದ ಕಾಂಗ್ರೆಸ್ ಸರ್ಕಾರ ಇವುಗಳನ್ನು ಜಾರಿಗೆ ತರಲು ಮುಂದಾಗಿದ್ದು, ಸರ್ಕಾರದ ಉಚಿತ ವಿದ್ಯುತ್, ಗೃಹಿಣಿಯರಿಗೆ 2000ರೂ. ಸೇರಿ 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಡೇಟ್ ಫಿಕ್ಸ್ ಆಗಿದೆ.
ಇದನ್ನು ಓದಿ: ಗ್ಯಾರಂಟಿ ಯೋಜನೆ ಲಾಭಕ್ಕಾಗಿ ಬಿಪಿಎಲ್ ಕಾರ್ಡ್ಗೆ ಮುಗಿಬಿದ್ದ ಜನರು; ಬಿಗ್ ಶಾಕ್ ನೀಡಿದ ಆಹಾರ ಇಲಾಖೆ!
ಹೌದು, ಬಹುತೇಕ ಮುಂದಿನ ಗುರುವಾರ(ಜೂ.2) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆ ಅನುಷ್ಠಾನ ಪ್ರಕ್ರಿಯೆ ಮತ್ತು ಫಲಾನುಭವಿಗಳ ಬಗ್ಗೆ ಘೋಷಣೆಯಾಗಲಿದೆ. ಯೋಜನೆ ಫಲಾನುಭವಿಗಳು, ಆರ್ಥಿಕ ಹೊರೆ ಲೆಕ್ಕಾಚಾರ, ಮಾನದಂಡಗಳ ಕುರಿತು ಇಲಾಖಾ ಅಧಿಕಾರಿಗಳು ರೂಪುರೇಷೆ ಅಂತಿಮಗೊಳಿಸುತ್ತಿದ್ದಾರೆ. CM ಸಿದ್ದರಾಮಯ್ಯ ಅವರು ದಿಲ್ಲಿಯಿಂದ ವಾಪಾಸ್ಸಾದ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: 26 ಮೇ 2023 ಜ್ಯೇಷ್ಠ ಮಾಸದ ಸಪ್ತಮಿ ತಿಥಿಯಂದು ಅಮೃತ ಕಾಲ ಮತ್ತು ರಾಹು ಕಾಲ ಯಾವಾಗ ಬರುತ್ತದೆ…!
ಕಾಂಗ್ರೇಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳು
- ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ,
- ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ,
- ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ,
- ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬದ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ ಹಾಗು
- ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವ ಪಧವೀದರರಿಗೆ ಧನ ಸಹಾಯ ಸೇರಿದಂತೆ 5 ಗ್ಯಾರಂಟಿಗಳನ್ನು ಕಾಂಗ್ರೇಸ್ ಸರ್ಕಾರ ನೀಡಿದ್ದು, ಇವುಗಳನ್ನು ಜಾರಿಗೆ ತರುವುದು ಗ್ಯಾರಂಟಿ ಎಂದು ಸ್ಪಷ್ಟಪಡಿಸಿದೆ.
ಇದನ್ನು ಓದಿ: ಪತಿ, ಪತ್ನಿ ಇಬ್ಬರೂ ಪಿಎಂ ಕಿಸಾನ್ ಪ್ರಯೋಜನ ಪಡೆಯಬಹುದೇ..? ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ..!