Post Office Recruitment 2023: ದೇಶಾದ್ಯಂತ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ 12,828 ಪೋಸ್ಟ್‌ಮಾಸ್ಟರ್ ಮತ್ತು ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ (India Post Office) ಅಧಿಸೂಚನೆ ಬಿಡುಗಡೆ ಮಾಡಿದೆ.
ಇದನ್ನು ಓದಿ: ಪಾನ್ ಕಾರ್ಡ್ ಇರುವವರಿಗೆ ಬಿಗ್ ಅಲರ್ಟ್, ಹೀಗೆ ಮಾಡಿದರೆ ರೂ.10 ಸಾವಿರ ಭಾರಿ ದಂಡ!
ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು 18-40 ವರ್ಷ ವಯಸ್ಸಿನವರಾಗಿರಬೇಕು. ಇಲಾಖೆಯ ಅಧಿಕೃತ ವೆಬ್‌ಸೈಟ್ www.indiapost.gov.in ಆಗಿದ್ದು, 11 ಜೂನ್ 2023 ರೊಳಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ 100 ರೂ. ಆಗಿದೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿದವರೇ ಎಚ್ಚರಿಕೆ, 10 ವರ್ಷಕ್ಕಿಂತ ಹಳೆಯ ಆಧಾರ್ ನವೀಕರಿಸಲು ಜೂನ್ 14 ಕೊನೆ ದಿನ
ಹುದ್ದೆಗಳ ಸಂಪೂರ್ಣ ವಿವರ
- ಹುದ್ದೆಯ ಹೆಸರು: ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆಗಳು
- ಒಟ್ಟು ಹುದ್ದೆಗಳು: 12,828 ಹುದ್ದೆಗಳು (ಕರ್ನಾಟಕಕ್ಕೆ 48 ಹುದ್ದೆಗಳನ್ನು ಮೀಸಲಿರಿಸಲಾಗಿದೆ)
- ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು
- ಸಂಬಳ: 29,380/- ರೂಪಾಯಿಗಳು ತಿಂಗಳಿಗೆ
- ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)
- ಆಯ್ಕೆ ಮಾಡುವ ವಿಧಾನ: ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಮೆರಿಟ್ ಲಿಸ್ಟ್ ಆಧಾರದ ಮೇಲೆ ಹಾಗೂ ದಾಖಲೆಗಳ ಪರಿಶೀಲನೆ / ಸಂದರ್ಶನ ದ ಮೂಲಕ
- ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು: ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, 10ನೇ ತರಗತಿ ಅಂಕಪಟ್ಟಿ ಜನ್ಮ ದಿನಾಂಕದ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕಂಪ್ಯೂಟರ್ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯ ಇದ್ದರೆ ಮಾತ್ರ).
ಇದನ್ನು ಓದಿ: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲವೇ, ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಿ!
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನ: | 22-ಮೇ-2023 |
ಅರ್ಜಿ ಸಲ್ಲಿಸಲು ಕೊನೆಯ ದಿನ: | 11-ಜೂನ್-2023 |
ಸಲ್ಲಿಸಿದ ಅರ್ಜಿ ತಿದ್ದುಪಡಿ ಮಾಡುವ ದಿನಾಂಕ : | 12-ಜೂನ್-2023 ರಿಂದ 14-ಜೂನ್-2023 ವರೆಗೆ |
ಹೆಚ್ಚಿನ ಮಾಹಿತಿಗಾಗಿ ಪ್ರಮುಖ ಲಿಂಕ್ ಗಳು
ಇಲಾಖೆಯ ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಹುದ್ದೆಗಳ ಅಧಿಕೃತ ನೋಟಿಫಿಕೇಶನ್ ಗಾಗಿ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಇದನ್ನು ಓದಿ: 2000 ನೋಟು ವಾಪಸಾತಿ, ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಭೂಮಿಯ ಬೆಲೆ ಕುಸಿಯುತ್ತದೆಯೇ?