PUC Exam: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು,ಮೇ 22ರಿಂದ ಜೂನ್ 2ರವೆರೆಗೆ ಪರೀಕ್ಷೆಗಳು ನಡೆಯಲಿವೆ.
ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮೇ 22ರಿಂದ ಜೂನ್ 2ರವೆರೆಗೆ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 21ರಿಂದ 26ರವರೆಗೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆದು ಪಾಸಾಗುವ ಮೂಲಕ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಬಹುದು.
ಇದನ್ನು ಓದಿ: 03 ಮೇ 2023 ಈ ದಿನ ಮಿಥುನ ರಾಶಿಯವರಿಗೆ ವಿಶೇಷ ಲಾಭಗಳು..! ಇತರ ರಾಶಿಗಳ ಫಲಾಫಲಗಳು ಹೀಗಿವೆ
PUC-II ಪೂರಕ ಪರೀಕ್ಷೆಯ ವೇಳಾಪಟ್ಟಿ :
ಮೇ 22- ಕನ್ನಡ, ಮೇ 23- ಐಚ್ಛಿಕ ಕನ್ನಡ, ರಸಾಯನಶಾಸ್ತ್ರ. ಮೇ 24- ಇಂಗ್ಲೀಷ್ ಮತ್ತು ಮೇ 25 ರಂದು ಗಣಕ ವಿಜ್ಞಾನ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ. ಮೇ 26- ಇತಿಹಾಸ, ಸಂಖ್ಯಾಶಾಸ್ತ್ರ. ಮೇ 27- ಹಿಂದಿ. ಮೇ 29- ಭೂಗೋಳಶಾಸ್ತ್ರ, ಭೌತಶಾಸ್ತ್ರ. ಮೇ 30- ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ. ಮೇ 31- ರಾಜ್ಯಶಾಸ್ತ್ರ, ಗಣಿತಶಾಸ್ತ್ರ. ಜೂನ್ 1- ವ್ಯವಹಾರ ಅಧ್ಯಯನ. ಜೂನ್ 2- ಅರ್ಥಶಾಸ್ತ್ರ, ಜೀವಶಾಸ್ತ್ರ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ https://kseab.karnataka.gov.in/ ಸಂಪರ್ಕಿಸಿ
ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಒಂದು ಕುಟುಂಬದಲ್ಲಿ ಎಷ್ಟು ಜನರು ಪಡೆಯಬಹುದು?