ಭಾರತ ಸರ್ಕಾರವು ದೇಶದ ನಿವಾಸಿಗಳ ವೈಯಕ್ತಿಕ ಗುರುತಿಗಾಗಿ ಬಹು ಗುರುತಿನ ದಾಖಲೆಗಳನ್ನು ಅಧಿಕೃತಗೊಳಿಸಿದ್ದು, ಅವುಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಾಥಮಿಕ ಗುರುತಿನ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಕಾರ್ಡ್‌ಗಳು ಮುಖ್ಯವಾಗಿದ್ದರೂ, ಆಧಾರ್ ಕಾರ್ಡ್ (Aadhar card) ಅತ್ಯಂತ ಮುಖ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.
ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!
ಭಾರತ ಸರ್ಕಾರವು ಪರಿಶೀಲನೆಗಾಗಿ ಆಧಾರ್‌ನೊಂದಿಗೆ (Aadhar card) ಪಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೇರಿದಂತೆ ಹಲವು ಧಾಖಲೆಗಳನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇನ್ನು ಭಾರತದ ಪ್ರಜೆ ಆದವರು ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದ್ದು, 5 ವರ್ಷದ ಮಗು ಕೂಡ ಆಧಾರ್ ಕಾರ್ಡ್ ಅನ್ನು ಮಾಡಿಕೊಳ್ಳಹುದಾಗಿದೆ.
ಇದನ್ನು ಓದಿ: ಇನ್ಮುಂದೆ ಯುಪಿಐ ಮೂಲಕವೂ ಸಿಗಲಿದೆ ಸಾಲ; ಗೂಗಲ್ ಪೇ, ಫೋನ್‌ಪೇ ಮೂಲಕ ಸಾಲ ಹೇಗೆ?
ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update):
ಇನ್ನು ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದು ಅದನ್ನು ನೀವು ಇನ್ನು ಕೂಡ ಅಪ್ಡೇಟ್ ಮಾಡದಿದ್ದರೆ ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು UIDAI ಸೂಚನೆ ನೀಡಿದೆ.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ತೆರಳಿ, ಅಲ್ಲಿ 25 ಅಥವಾ 50 ರೂಪಾಯಿಗಳು ಶುಲ್ಕವನ್ನು ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಆದರೆ ಇದೀಗ UIDAI ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಿಕೊಡಲು ಮುಂದಾಗಿದ್ದು, ಈ ಉಚಿತ ಆಧಾರ್ ನವೀಕರಣವನ್ನು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.
ಉಚಿತವಾಗಿ ಆಧಾರ್ ಕಾರ್ಡ್ ನವೀಕರಣ (Free Aadhaar Card Update):
ಇನ್ನು, ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡದೆ 10 ವರ್ಷಗಳಾಗಿದ್ದರೆ, ಅಂತಹ ಆಧಾರ್ ಕಾರ್ಡ್ ಅನ್ನು ನವೀಕರಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸೂಚನೆ ನೀಡಿದ್ದು, 10 ವರ್ಷ ಹಳೆಯ ಎಲ್ಲಾ ಆಧಾರ್ ಕಾರ್ಡ್ ಅನ್ನು ಜೂನ್ 14 ರ ಒಳಗೆ ಉಚಿತವಾಗಿ ನವೀಕರಣ ಮಾಡಿಕೊಳ್ಳುವಂತೆ UIDAI ಆದೇಶವನ್ನ ಹೊರಡಿಸಲಾಗಿದೆ.
ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ
ಹೌದು, ಮೈ ಆಧಾರ್ ಪೋರ್ಟಲ್ ಗೆ https://myaadhaar.uidai.gov.in/ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಜೂನ್ 14ರವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಎಂದು UIDAI ಘೋಷಿಸಿದ್ದು, ಆಧಾರ್ ನವೀಕರಣ ಶುಲ್ಕವನ್ನು ಮನ್ನಾ ಮಾಡಲಾಗುತ್ತಿದೆ ತಿಳಿಸಿದ್ದು, ಇದನ್ನು ಹೊರತುಪಡಿಸಿ ವಿವಿಧ ಕೇಂದ್ರಗಳಲ್ಲಿ ಆಧಾರ್ ವಿವರ ಪರಿಷ್ಕರಿಸಲು 50 ರೂ ಶುಲ್ಕ ವಿಧಿಸಲಾಗುತ್ತದೆ ಎಂದು ಯುಐಡಿಎಐ ಹೇಳಿದೆ.
ನಿಯಮದ ಪ್ರಕಾರ ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷ ಪೂರ್ಣಗೊಂಡ ಬಳಿಕ ಕನಿಷ್ಠ ಒಂದು ಬಾರಿ ಪರಿಷ್ಕರಿಸಬೇಕಿದ್ದು, ಈ ಪ್ರಯೋಜನವು ಮುಂದಿನ ಮೂರು ತಿಂಗಳ ಅವಧಿಗೆ ಜೂನ್ 14ರವರೆಗೆ ಮಾತ್ರ ಲಭ್ಯವಿರುತ್ತದೆ.
ಇದನ್ನು ಓದಿ: EPFOನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ