ಸಾರ್ವಜನಿಕ ಭವಿಷ್ಯ ನಿಧಿ(PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಸೇರಿದಂತೆ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ? ನೀವು ಆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ,ನಿಮ್ಮ ಆಧಾರ್ ಸಂಖ್ಯೆಯನ್ನು(Aadhar Card) ಪೋಸ್ಟ್ ಆಫೀಸ್ (Post office) ಅಥವಾ ಖಾತೆಯು ಆಯಾ ಯೋಜನೆಗಳಿಗೆ ಸಂಬಂಧಿಸಿದ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಬೇಕು. ಆಧಾರ್ ಸಂಖ್ಯೆಯನ್ನು ಒದಗಿಸದ ಖಾತೆಗಳನ್ನು ಅಮಾನತುಗೊಳಿಸಲಾಗುತ್ತದೆ.
ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ
ನೀವು ಆಧಾರ್ ಸಂಖ್ಯೆಯನ್ನು(Aadhar card) ಒದಗಿಸುವವರೆಗೆ ನಿಮ್ಮ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ಹಣ ಜಮಾ ಮಾಡುವುದು ಮತ್ತು ಹಿಂಪಡೆಯುವುದು ಅದರಲ್ಲಿ ನಡೆಯುವುದಿಲ್ಲ. ಹಾಗಾಗಿ ಕೂಡಲೇ ನಿಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಿ. ನೀವು ಆಧಾರ್ ಸಂಖ್ಯೆಯನ್ನು ಒದಗಿಸಲು ಗಡುವು ಸೆಪ್ಟೆಂಬರ್ 30, 2023 ರವರೆಗೆ ಇರುತ್ತದೆ. ಇನ್ನೂ ಸಮಯವಿದೆ ಎಂದು ಮರೆತರೆ ಬಾರಿ ಬೆಲೆ ತೆರಬೇಕಾಗುತ್ತದೆ.
ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಈಗಾಗಲೇ ಘೋಷಿಸಿದೆ. ಅಸ್ತಿತ್ವದಲ್ಲಿರುವ ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಲಿಂಕ್ ಮಾಡಬೇಕು ಎಂದು ಮಾರ್ಚ್ 31, 2023 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಈಗಾಗಲೇ ಖಾತೆಯನ್ನು ತೆರೆದಿರುವ ಠೇವಣಿದಾರರು ಇಲ್ಲಿಯವರೆಗೆ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ, ಅವರು ಅದನ್ನು ಏಪ್ರಿಲ್ 1, 2023 ರಿಂದ ಆರು ತಿಂಗಳೊಳಗೆ ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30, 2023 ರಂದು ಆರು ತಿಂಗಳ ಅವಧಿಗೆ ಮುಕ್ತಾಯವಾಗುತ್ತದೆ. ಸಣ್ಣ ಮೊತ್ತದ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.’ ಎಂದು ಕೇಂದ್ರ ಹಣಕಾಸು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!
ಸೆಪ್ಟೆಂಬರ್ 30, 2023 ರೊಳಗೆ ಆರು ತಿಂಗಳೊಳಗೆ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ, ಈ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಅದರ ನಂತರ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಹೌದು, ಸಣ್ಣ ಉಳಿತಾಯ ಖಾತೆಯೊಂದಿಗೆ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುವುದಿಲ್ಲ. ಇದು ಗಂಭೀರ ನಷ್ಟಕ್ಕೆ ಕಾರಣವಾಗುತ್ತದೆ.
ಆಧಾರ್ ಸಂಖ್ಯೆಯನ್ನು ಒದಗಿಸದ ಹೊರತು ಖಾತೆದಾರರು ತಮ್ಮ ಖಾತೆಗಳಿಗೆ PPF ಅಥವಾ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samriddhi Yojana) ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ.
ಮತ್ತೊಂದೆಡೆ.. ಉಳಿತಾಯ ಖಾತೆ ಹೊಂದಿರುವ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಮೆಚ್ಯೂರಿಟಿ ನಗದು ಕೂಡ ಜಮಾ ಆಗುವುದಿಲ್ಲ. ಇದರಿಂದ ಬ್ಯಾಂಕ್ ಸುತ್ತಾಡಬೇಕಾಗಿದೆ.
ಇದನ್ನು ಓದಿ: EPFOನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ