ಯುಪಿಐ(UPI) ಪಾವತಿ ವ್ಯವಸ್ಥೆ ಬಳಕೆ ಇಂದು ಹೆಚ್ಚಿದ್ದು, ಈ ಡಿಜಿಟಲ್ ಪಾವತಿ ವ್ಯವಸ್ಥೆಯಿಂದ(Digital payment system) ನಗದು ಪಡೆಯಲು ಬ್ಯಾಂಕ್ ಅಥವಾ ಎಟಿಎಂಗೆ(ATM) ಹೋಗುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಈಗ ಯುಪಿಐ ಮೂಲಕ ಸಾಲವೂ ಸಿಗುವಂತಾದರೆ? ಹೌದು, ಇಂತಹ ಸೌಲಭ್ಯ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್(RBI) ಮುಂದಾಗಿದೆ.
ಗೂಗಲ್ ಪೇ(Google pay), ಫೋನ್‌ಪೇ (Phone pay) ಮುಂತಾದ ಯುಪಿಐ ಆಧಾರಿತ ಮೊಬೈಲ್ ಅಪ್ಲಿಕೇಷನ್‌ಗಳ(UPI based mobile application) ಮೂಲಕವೂ ಇನ್ಮುಂದೆ ಸಾಲ(Loan) ಪಡೆಯಬಹುದಾಗಿದ್ದು, ಆರ್‌ಬಿಐ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಯುಪಿಐ ಮತ್ತಷ್ಟು ಜನಪ್ರಿಯವಾಗಲಿದ್ದು, ಪ್ರಸ್ತುತ ಯುಪಿಐ ಮೂಲಕ ದಿನಕ್ಕೆ ಸರಾಸರಿ 36 ಕೋಟಿ ರೂ ವಹಿವಾಟುಗಳು ನಡೆಯುತ್ತಿವೆ.
ಈ ಬಗ್ಗೆ RBI ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಹಣಕಾಸು ನೀತಿ ಸಮಿತಿಯ ದ್ವಿಮಾಸಿಕ ವರದಿ ಪ್ರಕಟಿಸುವ ಸಂದರ್ಭದಲ್ಲಿ ಮಾಹಿತಿ ನೀಡಿದ್ದು, ಯುಪಿಐ ಮೂಲಕ ಬ್ಯಾಂಕ್ ಗಳ ಪೂರ್ವ ಅನುಮತಿಯುಳ್ಳ ಸಾಲಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಗ್ರಾಹಕರಿಗೆ ಸಾಲ ಪಡೆಯುವುದು ಕೂಡಾ ಸುಲಭವಾಗಲಿದೆ. ಇದರಿಂದ ಚೀನಾ ಮೂಲದ ಸಾಲ ಅಪ್ಲಿಕೇಷನ್‌ಗಳ ವಂಚನೆ ತಪ್ಪಿಸಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ
ಯುಪಿಐ ಮೂಲಕವೂ ಸಾಲ ಹೇಗೆ
ಇನ್ನು, ಬ್ಯಾಂಕಿನಿಂದ ಪೂರ್ವ ಅನುಮೋದನೆಗೊಂಡಿರುವ ಸಾಲ ಅಥವಾ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳು (pre-sanctioned credit lines) ಗ್ರಾಹಕರಿಗೆ ಮೊದಲೇ ನಿರ್ದಿಷ್ಟ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿರುತ್ತದೆ. ಇನ್ನು, ಬ್ಯಾಂಕ್ ನಿಂದ ಮಂಜೂರಾಗಿರುವ ಸಾಲವನ್ನು ಯುಪಿಐ ಮೂಲಕ ಪಡೆಯಬಹುದಾಗಿದ್ದು, ಗ್ರಾಹಕ ಎಷ್ಟು ಮೊತ್ತದ ಹಣವನ್ನು ವಿತ್ ಡ್ರಾ ಮಾಡಿರುತ್ತಾನೋ ಅಥವಾ ಬಳಸಿಕೊಂಡಿರುತ್ತಾನೋ ಅದಕ್ಕೆ ಮಾತ್ರ ಬಡ್ಡಿ ದರ ಪಾವತಿಸಬೇಕು.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!
ಇಷ್ಟು ದಿನ ಯುಪಿಐ ಅನ್ನು ಪಾವತಿಗಾಗಿ ಬ್ಯಾಂಕ್ ಡೆಬಿಟ್ ಖಾತೆಗಳು ಮತ್ತು ರುಪೇ ಕ್ರೆಡಿಟ್ ಕಾರ್ಡ್ ಗಳಿಗೆ(RuPay Credit Card) ಮಾತ್ರ ಲಿಂಕ್ ಮಾಡಲಾಗಿತ್ತು. ಆರ್ ಬಿಐ(RBI) ಘೋಷಣೆಯಿಂದ ಈಗ ಯುಪಿಐ ಪ್ರಯೋಜನಗಳಿಗೆ ಮತ್ತಷ್ಟನ್ನು ಸೇರ್ಪಡೆಗೊಳಿಸಿದೆ.
ಇದನ್ನು ಓದಿ: EPFOನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ