ಅಡುಗೆ ಅನಿಲ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY) LPG ಗ್ಯಾಸ್ ಹೊಂದಿರುವವರಿಗೆ 200 ರೂ ಸಬ್ಸಿಡಿ ಸಿಗಲಿದೆ. ಉಜ್ವಲ ಯೋಜನೆಯಡಿ ಕನೆಕ್ಷನ್ ಹೊಂದಿದ್ದರೆ ಈ ಸಬ್ಸಿಡಿ ನಿಮ್ಮ ಕೈಸೇರಲಿದೆ.
ಮತ್ತೊಂದೆಡೆ ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್ ಲಭ್ಯವಿದ್ದು, ರಾಜಸ್ಥಾನ ಸರ್ಕಾರ `ಮುಖ್ಯಮಂತ್ರಿಗಳ ಗ್ಯಾಸ್ ಸಿಲಿಂಡರ್’ ಯೋಜನೆಯಡಿಯಲ್ಲಿ ನೀಡುತ್ತಿದೆ. ರಾಜ್ಯದಲ್ಲೂ ಇಂಥದ್ದೇ ಯೋಜನೆ ಜಾರಿಯಾಗಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ.
ಇನ್ನು,‘ಉಜ್ವಲ ಯೋಜನೆಯಡಿ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡಲಾಗುತ್ತಿದೆ. ಹೀಗಾಗಲೇ ಈ ಅನುದಾನವನ್ನ ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದ್ದು, ಇದರಿಂದ 9.6 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ.
ಇದನ್ನು ಓದಿ: ಮಹಿಳೆಯರಿಗೆ ಸಂತಸದ ಸುದ್ದಿ: ಅಂಚೆ ಕಚೇರಿಗಳಲ್ಲಿ ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ?
ಅಷ್ಟೇ ಅಲ್ಲ, ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ(LPG cylinder) ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಣೆ ಮಾಡುತ್ತವೆ. ಅದೇ ರೀತಿ,ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1 ರಂದು ಸಿಲಿಂಡರ್ ದರದಲ್ಲಿ ಇಳಿಕೆಯಾಗಿದ್ದು, 2024 ರ ಆರ್ಥಿಕ ವರ್ಷದ ಮೊದಲ ದಿನದಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು (Commercial Gas Cylinders Rate) ಸುಮಾರು ₹92 ರಷ್ಟು ಕಡಿತಗೊಳಿಸಲಾಗಿದೆ.
ಇದನ್ನು ಓದಿ: PPF, ಸುಕನ್ಯಾ ಸಮೃದ್ಧಿಯಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್- ಪ್ಯಾನ್ ಕಡ್ಡಾಯ; ಕೇಂದ್ರದ ಮಹತ್ವದ ನಿರ್ಧಾರ