Income Tax Return: 2022-23ನೇ ಹಣಕಾಸು ವರ್ಷದ (Financial year) ಆದಾಯ ತೆರಿಗೆ (Income Tax Return) ರಿಟರ್ನ್ಸ್ ಜುಲೈ 31 ರೊಳಗೆ ಸಲ್ಲಿಸಬೇಕು. ಹೌದು, ಆದಾಯ ತೆರಿಗೆದಾರರ ಆದಾಯವು ರೂ.2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಅಗತ್ಯವಾಗಿ ನೀವು ಐಟಿಆರ್(ITR Filing) ಅನ್ನು ಸಲ್ಲಿಸಬೇಕಾಗುತ್ತದೆ. ಇದನ್ನು, ನೀಡಿದ ಗಡುವಿನೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಬೇಕು. ಸಲ್ಲಿಸದಿದ್ದರೆ ಹಲವಾರು ಪರಿಣಾಮಗಳಿಗೆ ಕಾರಣವಾಗುತ್ತವೆ.
ಇದನ್ನು ಓದಿ: ರಾಷ್ಟ್ರೀಯ ಕುಟುಂಬ ನೆರವು ಯೋಜನೆ; ಈ ಯೋಜನೆಯಡಿ ನಿಮಗೆ ಸಿಗಲಿದೆ 20,000 ರೂ ನೆರವು
ಹೌದು, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234 ಎಫ್ ಪ್ರಕಾರ, ಐಟಿಆರ್ ((Income Tax Returns) ಅನ್ನು ತಡವಾಗಿ ಸಲ್ಲಿಸಿದರೆ ರೂ.5 ಸಾವಿರ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಜತೆಗೆ ಬಡ್ಡಿಯನ್ನೂ ಪಾವತಿಸಬೇಕು. ತೆರಿಗೆ ಬಾಕಿಯ ಮೇಲೆ ಶೇಕಡಾ 1 ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೀವು ಗಡುವಿನ ಮೊದಲು ITR ಅನ್ನು ಸಲ್ಲಿಸಿದರೆ, ನೀವು ದಂಡದಿಂದ ಬಚಾವಾಗಬಹುದು.
ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ
ಜುಲೈ 31 ರ ಮೊದಲು ಆದಾಯ ತೆರಿಗೆ ರಿಟರ್ನ್ಸ್(Income Tax Returns) ಸಲ್ಲಿಸದಿದ್ದರೆ, ವಾರ್ಷಿಕ ಆದಾಯ 5 ಲಕ್ಷದವರೆಗೆ ಇರುವ ತೆರಿಗೆದಾರರಿಗೆ ವಿಳಂಬ ಶುಲ್ಕ 1,000 ರೂ ಮತ್ತು ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ 5,000 ರುಪಾಯಿ ದಂಡ ವಿಧಿಸಲಾಗುತ್ತದೆ. ನಿಮ್ಮ ಒಟ್ಟು ಒಟ್ಟು ಆದಾಯವು ಮೂಲ ವಿನಾಯಿತಿ (Exemption) ಮಿತಿಯನ್ನು ಮೀರದಿದ್ದರೆ ಯಾವುದೇ ದಂಡವನ್ನು ಪಾವತಿ ಮಾಡುವ ಅಗತ್ಯವಿಲ್ಲ
ಒಂದು ವೇಳೆ ನೀಡಿದ ಗಡುವಿನ ನಂತರ ಆದಾಯ ರಿಟರ್ನ್ಸ್ ಅನ್ನು ಸಲ್ಲಿಸಿದರೆ ಬಾಕಿ ಮೊತ್ತದ ಮೇಲೆ 1% ಬಡ್ಡಿಯನ್ನು ವಿಧಿಸಲಾಗುವುದು ಮತ್ತು ಈ ಮೊತ್ತವನ್ನು ಜುಲೈ 31 ರಿಂದ, ಹಿಂದಿನ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್ ಲವ್ವಿಡವ್ವಿ, ಮದುವೆ, ಹನಿಮೂನ್ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?
ಇನ್ನು, ಆದಾಯ ತೆರಿಗೆ ರಿಟರ್ನ್ಸ್(Income Tax Returns) ಸಲ್ಲಿಸಲು ನೀವು ವಿಳಂಬ ಮಾಡಿದರೆ ಅಥವಾ ವಿಫಲವಾದರೆ ಆದಾಯ ತೆರಿಗೆ ಇಲಾಖೆಯು ನಿಮಗೆ ನೋಟಿಸ್ ಕಳುಹಿಸಬಹುದು. ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡದಿದ್ದಲ್ಲಿ ಇಲಾಖೆಯ ಕಾನೂನು ನಿಯಮಗಳ (Legal Rule) ಪ್ರಕಾರ ಕ್ರಮ ತೆಗೆದುಳ್ಳಬಹುದು.
ಇದನ್ನು ಓದಿ: ಯುವಶಕ್ತಿ ಯೋಜನೆಗೆ ಇಂದು ಸಿಎಂ ಚಾಲನೆ: ಈ ಯೋಜನೆಯಡಿ 10 ಸಾವಿರ ರೂ ನಿಧಿ, 5 ಲಕ್ಷ ಸಾಲಕ್ಕೆ,1 ಲಕ್ಷ ಸಬ್ಸಿಡಿ
ITRನಿಂದ ಆಗುವ 7 ಪ್ರಯೋಜನಗಳು:
▶ ಅಭಿವೃದ್ಧಿ ಹೊಂದಿದ ದೇಶಗಳ ವೀಸಾಕ್ಕೆ ಐಟಿಆರ್ ಅಗತ್ಯ
▶ ITR ಅತ್ಯಂತ ಸ್ವೀಕಾರಾರ್ಹ ಆದಾಯ ಪುರಾವೆಯಾಗಿದೆ
▶ ITR ಅನ್ನು ಭರ್ತಿ ಮಾಡುವ ಮೂಲಕ ನೀವು ತೆರಿಗೆ ಮರುಪಾವತಿಯನ್ನು ಪಡೆಯಬಹುದು
▶ ಬ್ಯಾಂಕ್ ಸಾಲ ಪಡೆಯುವುದು ಸುಲಭ
▶ ವ್ಯಾಪಾರವನ್ನು ಪ್ರಾರಂಭಿಸಲು ITR ಅಗತ್ಯ
▶ ನಿಮಗೆ ಹೆಚ್ಚಿನ ವಿಮಾ ರಕ್ಷಣೆಯ ಅಗತ್ಯವಿದ್ದರೂ ಐಟಿಆರ್ ಅಗತ್ಯವಿದೆ
▶ ವಿಳಾಸ ಪುರಾವೆಯಲ್ಲಿಯೂ ಐಟಿಆರ್ ಉಪಯುಕ್ತವಾಗಿದೆ
ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: ಆಧಾರ್-ವೋಟರ್ ಐಡಿ ಲಿಂಕ್ ಗಡುವು ವಿಸ್ತರಣೆ