ಸೋಲಿನ ದವಡೆಯಿಂದ ಪಾರು ಮಾಡಿದ ರಾಹುಲ್‌, ಜಡೇಜಾ; ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ 5 ವಿಕೆಟ್ ಭರ್ಜರಿ ಜಯ

ಮುಂಬೈ: ಮುಂಬೈ ನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌, ರಾಹುಲ್‌ , ಜಡೇಜಾ ಅವರ ಅದ್ಬುತ ಬ್ಯಾಟಿಂಗ್ ನಿಂದ 5…

Ravindra Jadeja, KL Rahul

ಮುಂಬೈ: ಮುಂಬೈ ನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌, ರಾಹುಲ್‌ , ಜಡೇಜಾ ಅವರ ಅದ್ಬುತ ಬ್ಯಾಟಿಂಗ್ ನಿಂದ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನು ಓದಿ: KPSC ಯಲ್ಲಿ ಭರ್ಜರಿ ನೇಮಕಾತಿ: 242 ಲೆಕ್ಕ ಸಹಾಯಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಡಿದ ಆಸ್ಟ್ರೇಲಿಯಾ, ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ ಬೆದರಿ 35.4 ಓವರ್‌ಗಳಲ್ಲೇ 188 ರನ್‌ಗಳಿಗೆ ಆಲೌಟಾಗುವ ಮೂಲಕ 189 ರನ್‌ಗಳ ಗುರಿ ನೀಡಿತು. ಆಸ್ಟ್ರೇಲಿಯಾ ಪರ ಮಿಚೆಲ್‌ ಮಾರ್ಷ್ 81 ರನ್‌, ಸ್ಟೀವನ್ ಸ್ಮಿತ್ 22, ಲ್ಯಾಬುಸ್ಚಾಗ್ನೆ 15, ಜೋಶ್ ಇಂಗ್ಲಿಸ್ 26 ರನ್ ಗಳಿಸಿದರು. ಟೀಮ್ ಇಂಡಿಯಾ ಪರ ಶಮಿ ಮತ್ತು ಸಿರಾಜ್‌ ತಲಾ 3, ಜಡೇಜಾ 2, ಪಾಂಡ್ಯ ಮತ್ತು ಕುಲ್ದೀಪ್‌ ತಲಾ 1 ವಿಕೆಟ್‌ ಕಬಳಿಸಿದರು. ಜಡೇಜಾ, ರಾಹುಲ್‌ ಮತ್ತು ಗಿಲ್‌ ಅದ್ಭುತ ಕ್ಯಾಚ್‌ ಪಡೆದು ಮಿಂಚಿದರು.

Vijayaprabha Mobile App free

ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್‌ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?

ಸಂಕಷ್ಟದಿಂದ ಪಾರು ಮಾಡಿದ ರಾಹುಲ್‌, ಜಡೇಜಾ

ಆಸ್ಟ್ರೇಲಿಯಾ ನೀಡಿದ 189 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದು ಹಂತದಲ್ಲಿ 83ಕ್ಕೆ 5 ವಿಕೆಟ್‌ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಟೀಂ ಇಂಡಿಯಾಗೆ ರಾಹುಲ್‌ ಮತ್ತು ಜಡೇಜಾ ಆಪದ್ಬಾಂಧವರಾದರು. ಕೊನೆಗೂ ಫಾರ್ಮ್‌ ಕಂಡುಕೊಂಡಿರುವ ರಾಹುಲ್‌, ಅರ್ಧಶತಕ ಸಿಡಿಸಿದರು. ರಾಹುಲ್‌ಗೆ (75 ರನ್) ಇದು 13ನೇ ಹಾಫ್‌ ಸೆಂಚುರಿಯಾಗಿದ್ದು, ಒತ್ತಡದ ಸ್ಥಿತಿಯಲ್ಲಿ ಕ್ಲಾಸ್‌ ಆಗಿ ಬ್ಯಾಟ್‌ ಬೀಸಿದ್ದಾರೆ. ಇವರಿಗೆ ಜಡೇಜಾ (45) ಸಹ ಉತ್ತಮ ಸಾಥ್ ನೀಡಿ ತಂಡದ ಗೆಲುವಿಗೆ ಕಾರಣರಾದರು.  ಉಳುದಂತೆ ನಾಯಕ ಹಾರ್ದಿಕ್ ಪಾಂಡ್ಯ 25, ಶುಬ್ಮನ್ ಗಿಲ್ 20 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಮಾರ್ಕಸ್ ಸ್ಟೊಯಿನಿಸ್ 2 ವಿಕೆಟ್ ಪಡೆದರು.

ಇನ್ನು ಟೀಮ್ ಇಂಡಿಯಾ ಪರ ಅದ್ಬುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ರವೀಂದ್ರ ಜಡೇಜಾ ಪಂದ್ಯ ಪುರೋಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.