ಮೈಸೂರು: ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಲಹೆ ನೀಡಿದ್ದರು ಎಂಬ ಕಾರಣಕ್ಕೆ ಹೇರ್ ಕಟ್ ಮಾಡಿಸಿದೆ ಎಂಬ ಅರ್ಥದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕೆಲ ಫೋಟೋ ಗಳನ್ನು ಸಾಮಾಜಿಕ ಜಾಲತಾಣ ಎಕ್ಸ್.ಕಾಂನಲ್ಲಿ ಶೇರ್ ಮಾಡಿದ್ದು, ಇದನ್ನು ಸಚಿವ ಸೋಮಣ್ಣ ಅವರು ಸಲಹೆ ಸ್ವೀಕರಿಸಿದ್ದಕ್ಕೆ ಧನ್ಯವಾದ ಎಂದು ಮರು ಹಂಚಿಕೊಂಡಿದ್ದು, ನೆಟ್ಟಿಗರಿಂದ ಪರ, ವಿರೋಧ ಟೀಕೆಗಳು ಬಂದಿವೆ.
ಕೆಲ ದಿನಗಳ ವರೆಗೆ ಮಾಜಿ ಸಂಸದ ಪ್ರತಾಸ್ ಸಿಂಹ ಅವರು ಹೇರ್ ಕಟ್ ಮಾಡಿಸದೇ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ಕಂಡ ಕೇಂದ್ರ ಸಚಿವ ಸೋಮಣ್ಣ ಅವರು ಕೂದಲು ತೆಗೆಸುವಂತೆ ಹಲವು ಬಾರಿ ಸಲಹೆ ನೀಡಿದ್ದರಂತೆ. ಇದರಿಂದ ಮಾಜಿ ಸಂಸದ ಪ್ರತಾಪ್ ಅವರು ಕಟಿಂಗ್ ಮಾಡಿಕೊಂಡೆ ಎಂದು ಟ್ವೀಟ್ ಮಾಡಿದ್ದಾರೆ. ಅನ್ನು ಸ್ವತಃ ಸೋಮಣ್ಣ ಅವರು ಮರು ಹಂಚಿಕೊಂಡಿದ್ದಾರೆ.
ನನ್ನ ಸಲಹೆ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. https://t.co/CvsUdI3TWB
— V. Somanna (@VSOMANNA_BJP) October 10, 2024
Read Also: Team India: ಡಿಎಸ್ಪಿಯಾದ ಬೌಲರ್ ಮೊಹಮ್ಮದ್ ಸಿರಾಜ್
ಜನನಾಯಕರ ವಿರುದ್ಧ ನೆಟ್ಟಿಗರ ಟೀಕೆ
ಈ ಇಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ನೆಟ್ಟಿಗರು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಇಂತಹ ಸಣ್ಣಪುಟ್ಟ ವಿಷಯಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಬದಲು ಜನರಿಗೆ ಉಪಯೋಗ ಆಗುವಂಥ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಹೊಸ ಲುಕ್‌ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸುಂದರಾಗಿ ಕಾಣುತ್ತಿದ್ದಾರೆ ಎಂದು ಶುಭಕೋರಿದ್ದಾರೆ.
[su_quote cite=”Shiva Ma’sia ಕನ್ನಡಿಗ” url=”https://x.com/VSOMANNA_BJP/status/1844366281564356807″]ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು.. ನಿಮ್ಮಿಬ್ಬರ ಸಾಧನೆಗೆ ಯಾವುದಾದ್ರೂ ದೊಡ್ಡ ಪ್ರಶಸ್ತಿ ಕೊಡಲೇಬೇಕು.. [/su_quote]