ಮಾರ್ಚ್ 23, ಭಾನುವಾರದಂದು ಅದ್ಭುತ ಪ್ರದರ್ಶನ ನೀಡಿದ ನಂತರ, ಮುಂಬೈ ಇಂಡಿಯನ್ಸ್‌ನ ಹೊಸ ಸ್ಪಿನ್ ಬೌಲರ್ ವಿಘ್ನೇಶ್ ಪುತ್ತೂರ್ ಅವರಿಗೆ ತಂಡದ ಒಡತಿ ನೀತಾ ಅಂಬಾನಿ ವಿಶೇಷ ಬಹುಮಾನ ನೀಡಿದರು. ಚೆನ್ನೈ ವಿರುದ್ಧದ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ, ವಿಘ್ನೇಶ್ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ಎಲ್ಲರನ್ನೂ ಬೆರಗುಗೊಳಿಸಿದರು.
ರೋಹಿತ್ ಶರ್ಮಾ ಅವರ ಬದಲು ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಎಡಗೈ ಮಣಿಕಟ್ಟಿನ ಸ್ಪಿನ್ನರ್, ತಮ್ಮ ನಾಲ್ಕು ಓವರ್‌ಗಳಲ್ಲಿ 32 ರನ್‌ಗಳಿಗೆ ಮೂರು ಪ್ರಮುಖ ವಿಕೇಟ್ ಗಳನ್ನು ಕಬಳಿಸಿದರು. ಮತ್ತು ತಂಡವು ಆಟಕ್ಕೆ ಮರಳಲು ಸಹಾಯ ಮಾಡಿದರು. ಎಂಎಸ್ ಧೋನಿ ಅವರು ವಿಘ್ನೇಶ್ ಅವರ ಸಮೀಪಿಸಿ ಮಾತನಾಡಿಸಿ ಅವರ ಭುಜವನ್ನು ತಟ್ಟಿ ವಿಘ್ನೇಶ್‌ಗೆ ಪ್ರೋತ್ಸಾಹಿಸಿದರು.
ಆಟ ಮುಗಿದ ನಂತರ ನೀತಾ ಅಂಬಾನಿ ಅವರು ವಿಘ್ನೇಶ್ ಅವರನ್ನು ತಂಡದ ಅತ್ಯುತ್ತಮ ಬೌಲರ್ ಎಂದು ಕರೆದು. ನಂತರ ನೀತಾ ಅಂಬಾನಿ ಕೇರಳ ಸ್ಪಿನ್ನರ್ ಟೀ-ಶರ್ಟ್ ಮೇಲೆ ವಿಶೇಷ ಪಿನ್ ಹಾಕಿದರು. ವಿಘ್ನೇಶ್ ಆಟದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ತಂಡಕ್ಕೆ ಹಾಗೂ ಎಂಐನ ಮಧ್ಯಂತರ ನಾಯಕ ಸೂರ್ಯಕುಮಾರ್ ಯಾದವ್ ಅವರ ಪ್ರೋತ್ಸಾಹಕ್ಕಾಗಿ ಕೃತಜ್ಞತೆ ಸಲ್ಲಿಸಿದರು,
“ಪಂದ್ಯವನ್ನು ಆಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಎಂಐ ಫ್ರಾಂಚೈಸಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಈ ಎಲ್ಲಾ ಆಟಗಾರರೊಂದಿಗೆ ಆಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನಗೆ ತುಂಬಾ ಸಂತೋಷವಾಗಿದೆ. ತಂಡಕ್ಕೆ ತುಂಬಾ ಧನ್ಯವಾದಗಳು. ಅಲ್ಲದೆ, ನಮ್ಮ ನಾಯಕ. ಸೂರ್ಯ ಭಾಯ್ ತುಂಬಾ ಬೆಂಬಲ ನೀಡಿದರು. ಅದಕ್ಕಾಗಿಯೇ ನಾನು ಎಲ್ಲಿಯೂ ಅಷ್ಟು ಒತ್ತಡವನ್ನು ಅನುಭವಿಸಲಿಲ್ಲ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ವಿಘ್ನೇಶ್ ತಿಳಿಸಿದರು.