ಮಾರ್ಚ್ 22 ರ ಶನಿವಾರ ನಡೆಯಲಿರುವ ಈ ಸೀಸನ್ ನಾ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಬಹು ನಿರೀಕ್ಷಿತ 18 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಅಂತಿಮವಾಗಿ ಮಾರ್ಚ್ 22 ರ ಶನಿವಾರದಂದು ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ.
ಐಪಿಎಲ್ ವಿಜೇತ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಬೇರ್ಪಟ್ಟ ನಂತರ ಕೆಕೆಆರ್ ಅಜಿಂಕ್ಯ ರಹಾನೆ ಅವರ ನಾಯಕತ್ವದಲ್ಲಿ ಒಂದು ಸೀಸನ್ ಅನ್ನು ನೋಡಲಿದ್ದು. ಯಾವ ರೀತಿ ರಣತಂತ್ರಗಳನ್ನು ರೂಪಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ,
ಐಪಿಎಲ್‌ನಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಇನ್ನೂ ಬೆನ್ನಟ್ಟುತ್ತಿರುವ ಆರ್‌ಸಿಬಿಯನ್ನು ಈ ಸೀಸನ್ ಅಲ್ಲಿ ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಪ್ಲೇಆಫ್‌ಗೆ ತಲುಪಿದ್ದರೂ, ಅವರು ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಮತ್ತೊಮ್ಮೆ ಕೇಂದ್ರಬಿಂದುವಾಗಿರುವುದರಿಂದ, ಎಲ್ಲಾರ ಗಮನ ವಿರಾಟ್ ಮೇಲಿಯೇ ಇರಲಿದೆ.
ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟಿಂಗ್ ಸ್ನೇಹಿ ಎಂದು ಹೆಸರುವಾಸಿಯಾಗಿದ್ದು, ಆದರೂ ಬೌಲರ್‌ಗಳು ಆರಂಭದಲ್ಲಿ ಸ್ವಲ್ಪ ಹೆಚ್ಚುವರಿ ಬೌನ್ಸ್ ಪಡೆಯಬಹುದು. ಇತಿಹಾಸ ನೋಡಿದರೆ, ಚೇಸಿಂಗ್ ತಂಡಗಳು ಇಲ್ಲಿ ಮೇಲುಗೈ ಸಾಧಿಸಿವೆ, ಇಬ್ಬನಿ ಅಂಶವು ಇರುವುದರಿಂದ ಬೌಲರ್‌ಗಳಿಗೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡುವುದು ಕೊಂಚ ಕಷ್ಟವೇನಿಸಬಹುದು. ಆದಾಗ್ಯೂ, ಮಳೆಯು ಪಂದ್ಯವನ್ನು ಹಾಳುಮಾಡುವ ಸಾಧ್ಯತೆ ಇವೆ ಎಂದು. ಹವಾಮಾನ ಮುನ್ಸೂಚನೆ ಕೊಟ್ಟಿದ್ದು, ಪಂದ್ಯದ ದಿನದಂದು ಗುಡುಗು, ಮಿಂಚು ಮತ್ತು ಬಿರುಗಾಳಿಯ ಮುನ್ಸೂಚನೆ ಕೊಟ್ಟಿದ್ದು, ಇದು ಆರಂಭವನ್ನು ವಿಳಂಬಗೊಳಿಸುತ್ತದೆ. ಆದಾಗ್ಯೂ, ಸಂಪೂರ್ಣ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ