ಲಕ್ನೋ: ಅಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿದ್ದರಿಂದ ಸೂರ್ಯಕುಮಾರ್ ಯಾದವ್ ಅವರ ಹೋರಾಟದ ಅರ್ಧಶತಕ ವ್ಯರ್ಥವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ, ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ (31 ಎಸೆತಗಳಲ್ಲಿ 60) ಮತ್ತು ಐಡೆನ್ ಮಾರ್ಕ್ರಾಮ್ (38 ಎಸೆತಗಳಲ್ಲಿ 53) ಅವರ ಅರ್ಧಶತಕಗಳ ನೆರವಿನಿಂದ, ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ (5/36) ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಐದು ವಿಕೆಟ್ ಗೊಂಚಲು ಪಡೆದಿದ್ದರೂ ಸಹ, 203/8 ರನ್ ಗಳಿಸಿತು.
ಬೃಹತ್ ಗುರಿಯನ್ನು ಬೆನ್ನತ್ತಿ ಹೊರಟ ಮುಂಬೈ ತಂಡವು ಆರಂಭದಲ್ಲೇ ಆಘಾತವನ್ನು ಅನುಭವಿಸಿತು, ತಂಡದ ಓಪನರ್ಸ್ ಆದ ರಯಾನ್ ರಿಕೆಲ್ಟನ್ ಮತ್ತು ವಿಲ್ ಜ್ಯಾಕ್ಸ್ ಆಲ್ಪ ಮೊತ್ತಕ್ಕೆ ಔಟಾಗಿ ಹೊರಟರು, ನಂತರ ನಮನ್ ಧೀರ್ ಜೊತೆ ಸೂರ್ಯಕುಮಾರ್ ಯಾದವ್ ಈ ಜೋಡಿ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು, ಈ ಜೋಡಿ 3ನೇ ವಿಕೆಟ್ ಗೆ 35 ಎಸೆತಗಳಲ್ಲಿ 69 ಗಳಿಸಿ ಮುಂಬೈ ತಂಡಕ್ಕೆ ಆಸರೆಯಾದರು, ನಮನ್ 24 ಎಸೆತಗಳಲ್ಲಿ 46ರನ್ ಕಲೆಹಾಕಿ ದ್ವಿಗೇಶ್ ಅವರ ಎಸೆತದಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು, ಸೂರ್ಯಕುಮಾರ್ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರೂ ಸಹ ಮುಂಬೈ ತಂಡವು ಐದು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಎಲ್‌ಎಸ್‌ಜಿ ಪರ ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಆವೇಶ್ ಖಾನ್ ಮತ್ತು ದಿಗ್ವೇಶ್ ರಥಿ ತಲಾ ಒಂದು ವಿಕೆಟ್ ಪಡೆದರು.