ಕಳೆದ ಐಪಿಎಲ್ ಸೀಸನ್ ಅಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಮೇಲೆ ವಿಧಿಸಲಾಗಿದ್ದ ಒಂದು ಪಂದ್ಯದ ನಿಷೇಧವು 2025ರ ಐಪಿಎಲ್‌ನಲ್ಲಿ ಮುಂದುವರಿಯಲಿದ್ದು, ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕೆ ಆಲ್‌ರೌಂಡರ್ ಲಭ್ಯವಿರುವುದಿಲ್ಲ.
ತಂಡದ ಕೋಚ್ ಮಹೇಲ ಜಯವರ್ಧನೆ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ ಸೂರ್ಯಕುಮಾರ್ ಯಾದವ್ ನಾಯಕತ್ವದ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಹಾರ್ದಿಕ್ ತಿಳಿಸಿದರು.
ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಹಾರ್ದಿಕ್ ತಮ್ಮ ಅಮಾನತು ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
“ನನ್ನೊಂದಿಗೆ ಮೂವರು ನಾಯಕರು ಆಡುತ್ತಿರುವುದು ನನ್ನ ಅದೃಷ್ಟ – ರೋಹಿತ್ (ಶರ್ಮ), ಸೂರ್ಯ ಮತ್ತು (ಜಸ್ಪ್ರಿತ್) ಬುಮ್ರಾ. ಅವರು ನನಗೆ ಯಾವುದೇ ಸಹಾಯ ಬೇಕಾದಾಗ ನನ್ನ ಜೊತೆ ಇರುತ್ತಾರೆ” ಎಂದು ಅವರು ಹೇಳಿದರು.
ಬುಮ್ರಾ ಬೆನ್ನುನೋವಿನಿಂದ ಚೇತರಿಸಿಕೊಂಡು ಮುಂಬೈ ತಂಡಕ್ಕೆ ಯಾವಾಗ ಸೇರುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಸ್ತುತ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಉಳಿದಿದ್ದಾರೆ, ಎಂದು ತಂಡದ ಮುಖ್ಯ ಕೋಚ್ ಜಯವರ್ಧನೆ ದೃಢಪಡಿಸಿದರು.
“(ಬುಮ್ರಾ) ಅವರ ಬಗ್ಗೆ NCA ಪ್ರತಿಕ್ರಿಯೆ ಏನು ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಅವರು ಬೇಗನೆ ತಂಡವನ್ನು ಸೇರಬೇಕು ಎಂದು ಆಶಿಸುತ್ತೇವೆ” ಎಂದು ಕೋಚ್ ಹೇಳಿದರು.