ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಎಂಎಸ್ ಧೋನಿ ಅವರ ಸ್ಟಂಪ್‌ಗಳ ಹಿಂದೆ ಮಿಂಚಿನ ವೇಗದ ಕೈಗಳು ದೊಡ್ಡ ಚರ್ಚೆಗೆ ಕಾರಣವಾಯಿತು. ರಚಿನ್ ರವೀಂದ್ರ ಅವರ 65 ಮತ್ತು ನೂರ್ ಅಹ್ಮದ್ ಅವರ 4 ವಿಕೆಟ್ ಗೊಂಚಲು ಸೂಪರ್ ಕಿಂಗ್ಸ್ ತಂಡದ ಆರಂಭಿಕ ಪಂದ್ಯದಲ್ಲಿ ಜಯಗಳಿಸಲು ಪ್ರಮುಖ ಕಾರಣವಾಯಿತು.ಆದರೆ ಪಂದ್ಯದ ಫಲಿತಾಂಶಕ್ಕೆ ‘ಈ ಅಂಶವು’ ಕಾರಣವಾಗಿರಬಹುದು ಎಂದು ನೆಟ್ಟಿಗರು ಸಿ.ಎಸ್.ಕೆ ತಂಡದ ವಿರುದ್ಧ ಆರೋಪಿಸಿದ್ದಾರೆ.
ಚೆಪಾಕ್‌ನಲ್ಲಿ ಆತಿಥೇಯ ಚೆನ್ನೈ ತಂಡದ ರುತುರಾಜ್ ಗಾಯಕ್ವಾಡ್ ಮತ್ತು ಖಲೀಲ್ ಅಹ್ಮದ್ ಅವರನ್ನು ಒಳಗೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳಿ ಆರೋಪಿಸುತ್ತಿದ್ದಾರೆ
ವೀಡಿಯೊದಲ್ಲಿ, ಖಲೀಲ್ ಮತ್ತು ರುತುರಾಜ್ ಒಂದು ಸಣ್ಣ ವಸ್ತುವನ್ನು ವಿನಿಮಯ ಮಾಡಿಕೊಂಡಂತೆ ತೋರುತ್ತಿತ್ತು. ಸಿಎಸ್‌ಕೆ ತಂಡದ ನಾಯಕ ಆ ವಸ್ತುವನ್ನು ತನ್ನ ಜೇಬಿನಲ್ಲಿ ಇಟ್ಟುಕೊಳ್ಳುವುದರೊಂದಿಗೆ ವೀಡಿಯೊ ಕೊನೆಗೊಳ್ಳುವ ಈ ವೀಡಿಯೋ ಇದೀಗ ಎಲ್ಲೆಡೇ ವೈರಲ್ ಆಗಿದೆ.