ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಡಿಸೆಂಬರ್ 22 ರಂದು ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ ದತ್ತ ಸಾಯಿಯವರೊಂದಿಗೆ ಸಿಂಧು ಉದಯಪುರದಲ್ಲಿ ವಿವಾಹಿತರಾಗಲಿದ್ದಾರೆ.
ವಿವಾಹ ಡಿಸೆಂಬರ್ 22ರಂದು ನಡೆಯಲಿದ್ದು, ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರ ಮದುವೆ ಕಾರ್ಯಕ್ರಮಗಳು ಡಿಸೆಂಬರ್ 20 ರಿಂದ ಆರಂಭವಾಗಲಿವೆ.
ಲಾಸ್ ಏಂಜೆಲೆಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಸಿಂಧು, ಮುಂದಿನ ಎರಡು ವರ್ಷಗಳವರೆಗೆ ಬ್ಯಾಡ್ಮಿಂಟನ್ ಆಟವನ್ನು ನಿಶ್ಚಿತವಾಗಿಯೂ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
29 ವರ್ಷದ ಮಾಜಿ ವಿಶ್ವ ಚಾಂಪಿಯನ್ ಸಿಂಧು, ಸಯ್ಯದ್ ಮೋಡಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆದ್ದುಕೊಳ್ಳುವ ಮೂಲಕ ತಮ್ಮ ದೀರ್ಘ ಕಾಲದ ವೃತ್ತಿಯನ್ನು ಕೊನೆಗೊಳಿಸಿದರು. ಫೈನಲ್‌ನಲ್ಲಿ, ಸಿಂಧು ಚೀನಾದ ವಿಶ್ವದ 119ನೇ ರ‍್ಯಾಂಕ್‌ನ ವು ಲೊಯು ಅವರನ್ನು 21-14, 21-16 ಅಂತರದಿಂದ ಸೋಲಿಸಿದರು. ಈ ಟೂರ್ನಿಯಲ್ಲಿ ಇದು ಸಿಂಧು ಗೆದ್ದುಕೊಳ್ಳುವ ಮೂರನೇ ಬಾರಿಯಾಗಿದೆ.