ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಆಗಬಹುದು: ಶರಣಬಸ್ಸಪ್ಪಗೌಡ  ದರ್ಶನಾಪುರ

ಯಾದಗಿರಿ: ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಆಗಬಹುದು ಎಂದು ಯಾದಗಿರಿಯಲ್ಲಿ ಸಚಿವ ಶರಣಬಸ್ಸಪ್ಪಗೌಡ  ದರ್ಶನಾಪುರ ಅಚ್ಚರಿ ಹೇಳಿಕೆ ನೀಡಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ…

ಯಾದಗಿರಿ: ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಆಗಬಹುದು ಎಂದು ಯಾದಗಿರಿಯಲ್ಲಿ ಸಚಿವ ಶರಣಬಸ್ಸಪ್ಪಗೌಡ  ದರ್ಶನಾಪುರ ಅಚ್ಚರಿ ಹೇಳಿಕೆ ನೀಡಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಟೀಂ ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಆಗಬಹುದು ಎಂದಿದ್ದಾರೆ. ಬಿಜೆಪಿ ನಾಯಕರು ಯತ್ನಾಳ್‌ಗೆ ದೆಹಲಿಗೆ ಬುಲಾವ್ ಮಾಡಿದ್ರು, ಆದರೆ ಯತ್ನಾಳ ಬರಲ್ಲ ಅಂತ ಹೈಕಮಾಂಡ್ ಗೆ ಹೇಳಿದ್ದಾರೆ. 

ವಿಶ್ವಗುರು ಬಸವಣ್ಣನವರ ಬಗ್ಗೆ ಯತ್ನಾಳ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾಪುರುಷರ ಬಗ್ಗೆ ಹಾಗೆ ಮಾತನಾಡಬಾರದು. ಯತ್ನಾಳ ಏನು ಮಾತನಾಡಿದ್ದಾರೆ ಅವರಿಗೆ ಕೇಳಬೇಕು ಎಂದರು. ಬಿಜೆಪಿ ಸರಕಾರದ ಅವಧಿಯಲ್ಲಿ  ವಕ್ಫ್ ಎಂದು ನಮೂದಾಗಿದೆ‌. ವಕ್ಫ್ ವಿಚಾರದಲ್ಲಿ  ಬಿಜೆಪಿ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದರು.

Vijayaprabha Mobile App free

ಕೇಂದ್ರದಲ್ಲಿ ನರೇಂದ್ರ ಮೋದಿ ಬಹಳ ವೀಕ್ ಆಗಿದ್ದಾರೆ, ಬಿಜೆಪಿನವರು ನುಡಿದಂತೆ ನಡೆಯುವುದಿಲ್ಲ. ಚುನಾವಣೆ ಬಂದಾಗ ಬಿಜೆಪಿನವರು ಹಿಂದೂ ಎನ್ನುತ್ತಾರೆ, ಚುನಾವಣಾ ಮುಗಿದ ನಂತರ ನಾವು ಮುಂದು ನೀವು ಹಿಂದೂ ಎನ್ನುತ್ತಾರೆ. ಆದರೆ,ಕಾಂಗ್ರೆಸ್ ನುಡಿದಂತೆ ನಡೆಯುತ್ತದೆ, ಎಲ್ಲಾ ಸಮಾಜದ ಹಿತ ಕಾಪಾಡುತ್ತದೆ. 

ಉಪಚುನಾವಣೆಯಲ್ಲಿ ಎನ್ ಡಿಎ ಪಕ್ಷದವರು ಹಣದ ಹೊಳೆ ಹರಿಸಿದ್ರು ಇಬ್ಬರು ಸಿಎಂ ಮಕ್ಕಳಿಗೆ ಮತದಾರರು ಸೋಲಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆ ವಾಪಸ್ ತೆಗೆಯುವ ಪ್ರಶ್ನೆಯಿಲ್ಲ, ಬಿಜೆಪಿನವರು ಜನರ ದಾರಿ ತಪ್ಪಿಸುತ್ತಿದ್ದಾರೆ. ರೈತ ಪರ ಕಾಳಜಿ ಇದ್ದರೆ ಮೋದಿ ರೈತರ ಸಾಲ ಮನ್ನಾ ಮಾಡಲಿ ಎಂದ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ‌.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.