ದೇಶದ ಅಭಿವೃದ್ಧಿಗಾಗಿ ಪ್ರಧಾನಿ‌ ಹುದ್ದೆಯನ್ನು ‌ಬೇರೆಯವರಿಗೆ ಬಿಟ್ಟುಕೊಡಲಿ: ಸಂತೋಷ್ ಲಾಡ್

ಗದಗ: ದೇಶದ ಪರಿಸ್ಥಿತಿ ಈ ಪ್ರಧಾನಿ ಹುದ್ದೆಯಲ್ಲಿರೋ ಮೋದಿಯವರಿಂದ ದಿವಾಳಿ ಎದ್ದು‌ ಹೋಗಿದ್ದು, ನಿತೀನ್ ಗಡ್ಕರಿಯಂತಹ ಸೂಕ್ತರೂ ಪ್ರಧಾನಿ ಹುದ್ದೆಗೆ ಇದ್ದಾರೆ. ದೇಶದ ಹಿತದೃಷ್ಟಿಯಿಂದ ಬೇರೆಯವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ‌ ಕಾರ್ಯಕರ್ತರಾದಿಯಾಗಿ ಮುಖಂಡರು…

ಗದಗ: ದೇಶದ ಪರಿಸ್ಥಿತಿ ಈ ಪ್ರಧಾನಿ ಹುದ್ದೆಯಲ್ಲಿರೋ ಮೋದಿಯವರಿಂದ ದಿವಾಳಿ ಎದ್ದು‌ ಹೋಗಿದ್ದು, ನಿತೀನ್ ಗಡ್ಕರಿಯಂತಹ ಸೂಕ್ತರೂ ಪ್ರಧಾನಿ ಹುದ್ದೆಗೆ ಇದ್ದಾರೆ. ದೇಶದ ಹಿತದೃಷ್ಟಿಯಿಂದ ಬೇರೆಯವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ‌ ಕಾರ್ಯಕರ್ತರಾದಿಯಾಗಿ ಮುಖಂಡರು ಧ್ವನಿಯೆತ್ತಬೇಕೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.

ಗದಗ ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ‌ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಇಲ್ಲಿವರೆಗೆ ಸುಮಾರು 20ಕ್ಕೂ ಹೆಚ್ಚಿನ‌‌ ಜಿಲ್ಲೆಗಳಿಗೆ ತಾವು ಪ್ರವಾಸ ಮಾಡಿದ್ದು, ಕಾರ್ಮಿಕ‌ ಇಲಾಖೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು‌ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಅದರಂತೆ ಗದಗಿಗೂ ಬಂದು‌ ಸಭೆ ನಡೆಸಲಾಗಿದೆ. ರಾಜ್ಯದ ದೇಶದ ಸಮಸ್ಯೆಗಳ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕೇ‌ ವಿನಃ ಸಚಿವ ಸಂಪುಟ‌ ಸರ್ಜರಿ‌ ಅದು-ಇದು ಎನ್ನುವ ವಿಷಯಕ್ಕೆ ಮಹತ್ವ ನೀಡಬಾರದು. ಜನರ ಸಮಸ್ಯೆಗಳಿಗಿಂತ‌‌ ಅಭಿವೃದ್ಧಿಗಿಂತ ಸಚಿವ ಸಂಪುಟದ ವಿಷಯವೇನಷ್ಟೂ ಮಹತ್ವದ್ದಲ್ಲ. ಮಹತ್ವದ ಜನರ ವಿಚಾರಗಳಿಗೆ ಗಮನ‌ ನೀಡಬೇಕು ಎಂದರು.

Vijayaprabha Mobile App free

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜಣ್ಣ ವಿಚಾರ ಅವರವರಿಗೆ ಬಿಟ್ಟಿದ್ದಾಗಿದೆ.ಯಾರೂ ಹೊಸ ಸಿಎಂ ವಿಚಾರವನ್ನು ತೇಲಿಬಿಟ್ಟಿದ್ದಾರೆಯೋ ಅವರನ್ನೇ ಸುದ್ದಿಗಾರರು ಪ್ರಶ್ನಿಸಬೇಕೇ ಹೊರತು ನನ್ನನ್ನಲ್ಲ. ನನಗೆ ಸಂಬಂಧವಿಲ್ಲದ ಅಥವಾ ತಿಳಿಯದೇ ಇರುವ ವಿಚಾರದ ಬಗ್ಗೆ ಮಾತನಾಡುವುದು‌ ಸೂಕ್ತವಲ್ಲ. ನಾನು‌ ಯಾರ ಪರವೂ ಅಲ್ಲ, ವಿರೋದವೂ‌ ಅಲ್ಲ.ನಾನು‌ ಕಾಂಗ್ರೆಸ್ ಪಕ್ಷದ ಪರ ಎಂದು‌ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಂತೋಷ್ ಲಾಡ್ ಉತ್ತರಿಸಿದರು.

ಕುಂಭಮೇಳದಲ್ಲಿ ಎಷ್ಟೊಂದು ಜನರ ಸಾವಾಗಿದೆ. ಸಾವಿರಾರು ಜನರಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ನೆರವಾಗುವಂತೆ ಸುದ್ದಿಗಾರರು ಕೇಂದ್ರವನ್ನು‌ ಪ್ರಶ್ನೆ ಮಾಡಬೇಕು ಎಂದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.