ನವದೆಹಲಿ: ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೇ ಅಧಿಕ ಕಡುಬಡವರು ಇದ್ದಾರೆ ಎಂದು ವಿಶ್ವಸಂಸ್ಥೆ ವರದಿ ಬಹಿರಂಗ ಪಡಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆ ವರದಿ ಪ್ರಕಾರ, ಭಾರತದಲ್ಲಿ 23.4 ಕೋಟಿ ಜನರು ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದು, ಕಡು ಬಡವರನ್ನು ಹೊಂದಿರುವ ಟಾಪ್ 5 ರಾಷ್ಟ್ರಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.
ಉಳಿದಂತೆ ಕ್ರಮೇಣವಾಗಿ ಪಾಕಿಸ್ತಾನದಲ್ಲಿ 9.3 ಕೋಟಿ ಕಡು ಬಡವರಿದ್ದು, 2ನೇ ಸ್ಥಾನದಲ್ಲಿದೆ. ಇಥಿಯೋಪಿಯಾ 8.6 ಕೋಟಿ, ನೈಜೀರಿಯಾ 7.4 ಕೋಟಿ ಹಾಗೂ ಕಾಂಗೋ 6.6 ಕೋಟಿ ಜನರನ್ನು ಹೊಂದಿರುವ ದೇಶಗಳು ನಂತರದ ಸ್ಥಾನಗಳಲ್ಲಿವೆ.
ವಿಶ್ವದಲ್ಲಿ 110ಕೋಟಿ ಬಡವರು:
ವಿಶ್ವಾದ್ಯಂತ ಒಟ್ಟು 110 ಕೋಟಿ ಜನರು ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ 58.4 ಕೋಟಿ ಜನ ಅಪ್ರಾಪ್ತರೇ ಇದ್ದಾರೆ. ಇದು ಮಾಧ್ಯಮ ಮಾನವ ಅಭಿವೃದ್ಧಿ ಸೂಚ್ಯಂಕ ಎಂದು ವರದಿಯಲ್ಲಿ ಉಲ್ಲಖಿಸಲಾಗಿದೆ.
ವಿಶ್ವಬ್ಯಾಂಕ್ ವರದಿಯಲ್ಲಿಯೂ ಉಲ್ಲೇಖ:
ತೀರಾ ಇತ್ತೀಚೆಗೆ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿಯ ಪ್ರಕಾರವೂ ಭಾರತದಲ್ಲಿ ಇನ್ನೂ12.9 ಕೋಟಿ ಜನರು ಕಡು ಬಡತನ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಸಹ 2021ಕ್ಕೆ ಹೋಲಿಕೆ ಮಾಡಿದರೆ ಬಡತನ ಪ್ರಮಾಣ ಕಡಿಮೆಯಾಗಿದ್ದು, 3.8 ಕೋಟಿಯಷ್ಟು ಇಳಿಕೆಯಾಗಿದೆ ಎಂದು ತಿಳಿದು ಬಂದಿತ್ತು.
ಅಧಿಕ ಜಸಂಖ್ಯೆಯೆ ಕಾರಣ:
ವಿಶ್ವದಲ್ಲಿರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆ ಅತ್ಯಧಿಕವಾಗಿದೆ. ಈ ಕಾರಣದಿಂದ ಸಹಜವಾಗಿ ಬಡತನ ಸಂಖ್ಯೆಯಲ್ಲಿ ಭಾರತವೇ ಎದ್ದು ಕಾಣುತ್ತದೆ. ಒಂದು ವೇಳೆ ಆಯಾ ದೇಶಗಳ ಜನಸಂಖ್ಯೆಯ ಪ್ರಮಾಣದಲ್ಲಿ ಬಡತನ ಲೆಕ್ಕ ಹಾಕಿದರೆ ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಬಡತನ ಕಂಡು ಬರುತ್ತದೆ.