ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆ ವಾರ್ಡ ಸಂಖ್ಯೆ.14 ಮತ್ತು ಯಲ್ಲಾಪುರ ಪಟ್ಟಣ  ಪಂಚಾಯತಿ ವಾರ್ಡ ನಂ 12 ರಲ್ಲಿ ತೆರವಾಗಿರುವ ಸದಸ್ಯ ಸ್ಥಾನ ತುಂಬಲು ಉಪ ಚುನಾವಣೆ ಜರುಗಿಸುವ ಕುರಿತು ಚುನಾವಣಾ…

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆ ವಾರ್ಡ ಸಂಖ್ಯೆ.14 ಮತ್ತು ಯಲ್ಲಾಪುರ ಪಟ್ಟಣ  ಪಂಚಾಯತಿ ವಾರ್ಡ ನಂ 12 ರಲ್ಲಿ ತೆರವಾಗಿರುವ ಸದಸ್ಯ ಸ್ಥಾನ ತುಂಬಲು ಉಪ ಚುನಾವಣೆ ಜರುಗಿಸುವ ಕುರಿತು ಚುನಾವಣಾ ವೇಳಾಪಟ್ಟಿಯನ್ನು  ಹೊರಡಿಸಲಾಗಿದೆ.

ನವೆಂಬರ್ 4 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನ.11 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು,ನ.12 ರಂದು  ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. 

ನ.14 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದು, ಮತದಾನದ ಅವಶ್ಯವಿದ್ದಲ್ಲಿ, ನ.23 ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ನ.25 ರಂದು ನಡೆಸಲಾಗುವುದು. ನ.26 ರಂದು ಬೆ.8 ಗಂಟೆಗೆ ಮತಗಳ ಎಣಿಕೆಯ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.