ವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್‍ ರೆಡ್ಡಿ ಚಾಲನೆ

ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್‍ರೆಡ್ಡಿ ಅವರು ಶುಕ್ರವಾರ ಹಸಿರುನಿಶಾನೆ ನೀಡಿದರು. ಹಂಪಿಯ ಪಟ್ಟಾಭಿರಾಮದೇವಸ್ಥಾನದ ಮುಂಭಾಗ ಕೋವಿಡ್…

Union Minister Kishan Reddy vijayaprabha news

ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್‍ರೆಡ್ಡಿ ಅವರು ಶುಕ್ರವಾರ ಹಸಿರುನಿಶಾನೆ ನೀಡಿದರು.

ಹಂಪಿಯ ಪಟ್ಟಾಭಿರಾಮದೇವಸ್ಥಾನದ ಮುಂಭಾಗ ಕೋವಿಡ್ ಜಾಗೃತಿ ರಥಕ್ಕೆ ಚಾಲನೆ ನೀಡಿದ ಸಚಿವ ಕಿಶನ್‍ರೆಡ್ಡಿ ಅವರಿಗೆ ಪ್ರವಾಸೋದ್ಯಮ,ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಆನಂದಸಿಂಗ್, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು,ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಸಾಥ್ ನೀಡಿದರು.

ಕೋವಿಡ್ ಜಾಗೃತಿ ರಥವು ಅವಳಿ ಜಿಲ್ಲೆಗಳಾದ್ಯಂತ ಸಂಚರಿಸಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಿದೆ. ಕಲಾವಿದರು ಸಹ ಕೋವಿಡ್‍ನಿಂದ ದೂರವಿರುವುದರ ಕುರಿತು ತಮ್ಮ ಕಲಾಪ್ರದರ್ಶನದ ಮೂಲಕ ತಿಳಿಯಪಡಿಸಲಿದ್ದಾರೆ.

Vijayaprabha Mobile App free

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಭೋಯರ್ ಹರ್ಷಲ್ ನಾರಯಣರಾವ್,ಎಸ್ಪಿ ಡಾ.ಅರುಣ,ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ, ಪ್ರೆಸ್ ಇನ್‍ಫೇರಮೇಶನ್ ಬ್ಯೂರೋದ ಬಿ.ಜಿ.ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಅಧಿಕಾರಿ ರಾಮಕೃಷ್ಣ ಮತ್ತಿತರರು ಇದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.