ದಾವಣಗೆರೆ: ಜಿಲ್ಲೆಯ ಬೆಂಕಿಕೆರೆ ಗ್ರಾಮದ ಕೆರೆಯಲ್ಲಿ ಪ್ರೇಮಿಗಳಿಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದ್ದು, ಮೃತಪಟ್ಟ ಪ್ರೇಮಿಗಳನ್ನು ಬೆಂಗಳೂರು ಮೂಲದ ಚರಣ್ ಮತ್ತು ನಾಗವೇಣಿ ಎಂದು ಗುರುತಿಸಲಾಗಿದೆ.
ಹೌದು, ನಿನ್ನೆ (ಆ.17) ಇಬ್ಬರು ಬೈಕ್ನಲ್ಲಿ ಬೆಂಕಿಕೆರೆ ಗ್ರಾಮದ ಕೆರೆಯ ಬಳಿ ಬಂದಿದ್ದು, ಚರಣ್ ಬೆಂಗಳೂರಿನಲ್ಲಿ ಇರುವ ತನ್ನ ತಂದೆ ಮತ್ತು ಸ್ನೇಹಿತನಿಗೆ ಫೋನ್ ಮಾಡಿ ಇಬ್ಬರು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಬಳಿಕ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ನಂತರ ಸಂಬಂಧಿಕರ ಮಾಹಿತಿ ಮೇರೆಗೆ ಪೊಲೀಸರು ಕೆರೆಯ ಬಳಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಯುವಕನ ಬೈಕ್ ಮತ್ತು ಇಬ್ಬರ ಚಪ್ಪಲಿ ಪತ್ತೆಯಾಗಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದ್ದು ಇಬ್ಬರ ಮೃತದೇಹಗಳು ಪತ್ತೆಯಾಗಿದೆ ಎನ್ನಲಾಗಿದೆ.
ಇನ್ನು, ಇವರಿಬ್ಬರ ಪ್ರೀತಿಯನ್ನು ಮನೆಯವರು ವಿರೋಧಿಸಿದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದ್ದು, ಈ ಘಟನೆಯ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.