ದಾವಣಗೆರೆ ನ.11: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಕೋಳಿ ಮತ್ತು ಕುರಿ ಮಾಂಸ ಹಾಗೂ ಮೀನು ಸೇರಿದಂತೆ ಮಾಂಸದಂಗಡಿಗಳಿಂದ ಉತ್ಪತ್ತಿಯಾಗುವ ಪ್ರಾಣಿಜನ್ಯ ಮತ್ತು ವಧಾ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಆಸಕ್ತ ವೃತ್ತಿಪರ ಸಂಸ್ಥೆಗಳು, ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕರಿಂದ ಸೂಕ್ತ ಪ್ರಾಸ್ತಾವನೆಗಾಗಿ ಆಸಕ್ತಿ ವ್ಯಕ್ತಪಡಿಸುವಿಕೆಯನ್ನು ಈ ಮೂಲಕ ಆಹ್ವಾನಿಸಲಾಗುತ್ತಿದೆ.
ಆಸಕ್ತರು ಈ ಮಾಂಸದಂಗಡಿಗಳಿಂದ ಉತ್ಪತ್ತಿಯಾಗುವ ಪ್ರಾಣಿಜನ್ಯ ಮತ್ತು ವಧಾ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿಯನ್ನು ಅವಶ್ಯಕ ಸೂಕ್ತ ಖಾಸಗಿ ಜಾಗದಲ್ಲಿ ಅಥವಾ ಮಹಾನಗರಪಾಲಿಕೆಯು ನಿಗದಿಪಡಿಸಿದ ಸ್ಥಳದಲ್ಲಿ ತಮ್ಮ ಸ್ವಂತ ವ್ಯವಸ್ಥೆಯ ಮೂಲಕ ಮಾಡಬೇಕು. ಸೇವಾ ಪೂರೈಕೆದಾರರು ತಮ್ಮ ಸಂಪೂರ್ಣ ವ್ಯವಸ್ಥೆಯನ್ನು ತ್ಯಾಜ್ಯ ವಿಲೇವಾರಿ ನಿರ್ವಹಣಾ ನಿಯಮಾವಳಿಗಳು, 2016 ಸೇರಿದಂತೆ ಇನ್ನಿತರೆ ಸಕ್ಷಮ ಕಾನೂನು ಮತ್ತು ನಿಯಮಾವಳಿಗಳಿಗೆ ಬದ್ದರಾಗಿ ನಡೆಸಲು ಸಿದ್ದರಿರಬೇಕು.
ಆಸಕ್ತರು ತಾವು ಪ್ರಸ್ತಾಪಿಸಲಿಚ್ಚಿಸುವ ವ್ಯವಹಾರ ಮಾದರಿ, ನಿಮ್ಮ ಸಂಸ್ಥೆಯಲ್ಲಿರುವ ವಾಹನದ ವಿವರ(ಆರ್.ಸಿ ಬುಕ್, ವಿಮೆ, ಚಾಲಕರ ಡ್ರೈವಿಂಗ್ ಲೈಸೆನ್ಸ್), ಕಾರ್ಮಿಕರ ಸಂಖ್ಯೆ(ಒಂದು ವಾಹನಕ್ಕೆ 4 ಜನ ಸಹಾಯಕರಂತೆ), ಬಂಡವಾಳ ಕ್ರೋಢೀಕರಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ದಸ್ತಾವೇಜನ್ನು ನ.12ರ ನಂತರ ಈ ಕಚೇರಿಯ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗೂ ವಿಸ್ತ್ರುತ ಮಾಹಿತಿಗಳನ್ನು ಒಳಗೊಂಡಂತೆ ತಮ್ಮ ಪ್ರಸ್ತಾವನೆಯನ್ನು/ಆಸಕ್ತಿ ವ್ಯಕ್ತಪಡಿಸುವಿಕೆಯನ್ನು ನ.25ರ ಸಂಜೆ 4 ಗಂಟೆಯೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತರಾ ವಿಶ್ವನಾಥ ಮುದ್ದಜ್ಜಿ ತಿಳಿಸಿದ್ದಾರೆ.