ದಾವಣಗೆರೆ: ಮಾಯಕೊಂಡದಲ್ಲಿ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ

ದಾವಣಗೆರೆ ಆ.18: ಉದ್ಯಮ ಪ್ರಾರಂಭಿಸುವವರಿಗೆ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಿಡಾಕ್ ಸಂಸ್ಥೆಯು ನಿರಂತರವಾಗಿ ಉದ್ಯಮಶೀಲತೆಯ ತರಭೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ದಾವಣಗೆರೆ ಲೀಡ್ ಬ್ಯಾಂಕ್‍ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ…

three days entrepreneurship awareness training program at Mayakonda

ದಾವಣಗೆರೆ ಆ.18: ಉದ್ಯಮ ಪ್ರಾರಂಭಿಸುವವರಿಗೆ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಿಡಾಕ್ ಸಂಸ್ಥೆಯು ನಿರಂತರವಾಗಿ ಉದ್ಯಮಶೀಲತೆಯ ತರಭೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ದಾವಣಗೆರೆ ಲೀಡ್ ಬ್ಯಾಂಕ್‍ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕ ಜಿ.ಜಿ ದೊಡ್ಡಮನಿ ತಿಳಿಸಿದರು.

ಗುರುವಾರ ಮಾಯಕೊಂಡದ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್),ಧಾರವಾಡ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬ್ಯಾಡಗಿ, ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮದÀ”ದ ಉದ್ಘಾಟನಡೆಸಿ ಅವರು ಮತನಾಡಿದರು.

ಬ್ಯಾಂಕಿಂಗ್ ವ್ಯವಸ್ಥೆಯ ನೀತಿ ನಿಯಮಗಳು, ಅವಶ್ಯಕತೆಗೆ ಅನುಸಾರವಾಗಿ ಸಾಲ ಪಡೆಯಬೇಕು, ಉತ್ತಮ ಯೋಜನಾವರದಿಗಳ ಕುರಿತು ಹಾಗೂ ಉದ್ಯಮದಾರರಾಗುವ ಹಂತದಲ್ಲಿ ಎದುರಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿ ಸಲಹೆಗಳನ್ನು ನೀಡಿ ದೇಶದ ಆರ್ಥಿಕತೆಯಲ್ಲಿ ಉದ್ಯಮದಾರರ ಪಾತ್ರ ಹಾಗೂ ಜವಬ್ದಾರಿಗಳನ್ನು ತಿಳಿಸುವ ಮೂಲಕ ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು”.

Vijayaprabha Mobile App free

ದಾವಣಗೆರೆ ಸಿಡಾಕ್‍ನ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, .ಶಿಬಿರಾರ್ಥಿಗಳು ತಮ್ಮ ಜೀವನಾಭಿವೃದ್ದಿಗಾಗಿ ಕಂಡ ಕನಸುಗಳು ನನಸಾಗಲಿ ನಿಮ್ಮ ವಿದ್ಯಾಭ್ಯಾಸ ಪೂರೈಸಿದ ನಂತರ ಸ್ವಯಂ ಉದ್ಯಮ ಮಾಡುವ ನಿರ್ಧಾರ ಕೈಗೊಂಡಲ್ಲಿ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಸಹಾಯ ಸೌಲಭ್ಯ ಒದಗಿಸುವ ಹಲವಾರು ಯೋಜನೆಗಳಿದ್ದು ಅವುಗಳ ಪ್ರಯೋಜನ ಪಡೆದು ಯಶಸ್ವಿ ಉದ್ಯಮದಾರರಾಗಿ ರಾಷ್ಟ್ರದ ಅಭಿವೃದ್ದಿಗೆ ಕೊಡುಗೆ ನೀಡಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜಯ್ಯ ಎನ್.ಎಂ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಕೆಲಸಗಳನ್ನು ಅವಲಂಬಿಸದೇ ಸ್ವತಂತ್ರವಾಗಿ, ಸ್ವಾವಲಂಬಿ ಜೀವನ ನಡೆಸಲು ಹಾಗೂ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಲು ಉದ್ಯಮಶೀಲತೆ ಜ್ಞಾನ ಪಡೆಯುವುದು ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಜನ ಶಿಕ್ಷಣ ಸಂಸ್ಥಾನದ ನಿವೃತ್ತ ನಿರ್ದೇಶಕರಾದ ಮುಕುಂದಪ್ಪ ಬಿ. ರವರು ತರಬೇತಿಯಲ್ಲಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮ ಆರಂಭಿಸಲು ಇರುವಂತಹ ಅವಕಾಶಗಳನ್ನ ಗುರುತಿಸುವುದು ಹೇಗೆ ಮತ್ತು ಸವಾಲುಗಳನ್ನು ಎದುರಿಸುವ ಬಗೆ ಕುರಿತು ಮಾಹಿತಿ ನೀಡುವುದರ ಜೊತೆಗೆ ಶಿಭಿರಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಶಿಬಿರಾರ್ಥಿಯಾದ ಭಾವನಾ.ಪಿ. ಪ್ರಾರ್ಥನೆ ಹಾಡಿದರು, ದಾವಣಗೆರೆಯ ಸಿಡಾಕ್ ತರಬೇತುದಾರರಾದ ಬಸವರಾಜ ಜಿ.ಬಿ ಸ್ವಾಗತಿಸಿದರು, ಮಂಜುನಾಥ.ಕೆ ವಂದನಾರ್ಪಣೆ ಹಾಗೂ ವಿನಯ ಜಿ.ಕೆ ನಿರೂಪಣೆಯನ್ನು ಮಾಡಿದರು,

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಟರಾಜ ಕೆ ಉದ್ಯೋಗಕೋಶದ ಸಂಯೋಜಕರು, ರಾಘವೇಂದ್ರರಾವ್, ಜಿ.ಎಸ್, ಪ್ರೊ.ಚಂದ್ರಶೇಖರಪ್ಪ, ಅಶೋಕ್ ಬಿ.ಎಲ್, ಬಿ.ಎಲ್.ತಿಲಕ್ ಸೇರಿದಂತೆ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.