ಭಾಗ್ಯಜ್ಯೋತಿ ಇರುವವರಿಗೆ ಶಾಕ್: 40 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸಿದರೂ ಬಿಲ್; ಬಾಕಿ ಇರುವ ಬಿಲ್ ಕಟ್ಟದೆ ಇದ್ದರು ಕೂಡ ಬೀಳುತ್ತೆ ಕತ್ತರಿ!

ಹರಪನಹಳ್ಳಿ: ಇನ್ಮುಂದೆ ಬಾಕಿ ಇರುವ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳ ಬಾಕಿ ಇರುವ ವಿದ್ಯುತ್ ಸ್ಥಾವರಗಳ ಬಿಲ್ ಕಟ್ಟದೆ ಇದ್ದರೂ ಕೂಡ ಬೀಳುತ್ತೆ ಕತ್ತರಿ. ಹೌದು, ಬೆಸ್ಕಾಂ ಅಧಿಕಾರಿಗಳು ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ…

ಹರಪನಹಳ್ಳಿ: ಇನ್ಮುಂದೆ ಬಾಕಿ ಇರುವ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳ ಬಾಕಿ ಇರುವ ವಿದ್ಯುತ್ ಸ್ಥಾವರಗಳ ಬಿಲ್ ಕಟ್ಟದೆ ಇದ್ದರೂ ಕೂಡ ಬೀಳುತ್ತೆ ಕತ್ತರಿ.

ಹೌದು, ಬೆಸ್ಕಾಂ ಅಧಿಕಾರಿಗಳು ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಪಂಚಾಯಿತಿ ನಿಚ್ಚಾಪುರ ಗ್ರಾಮದಲ್ಲಿ ಬಿಲ್ ಕಟ್ಟದೆ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳ ಬಾಕಿ ಇರುವವರಿಗೆ ನೋಟಿಸ್ ಜಾರಿ ಮಾಡಿ ವಿದ್ಯುತ್ ಕಡಿತಗೊಳಿಸಿದ್ದಾರೆ.

ಗ್ರಾಮಸ್ಥರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ:

Vijayaprabha Mobile App free

ಇದನ್ನು ತಿಳಿದ ಅಡವಿಹಳ್ಳಿ ಪಂಚಾಯಿತಿ ನಿಚ್ಚಾಪುರ ಗ್ರಾಮದ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳು ಇರುವವರು ಬೆಸ್ಕಾಂ ಹರಪನಹಳ್ಳಿ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿದ್ದು, ಸರ್ಕಾರದಿಂದ ಭಾಗ್ಯಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಘೋಷಣೆಯಿದ್ದರೂ ಕೂಡ ಏಕೇ ನೋಟಿಸ್ ನೋಟಿಸ್ ಜಾರಿ ಮಾಡಿ ವಿದ್ಯುತ್ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದಿಂದ 40 ಯುನಿಟ್ ವರೆಗೆ ಮಾತ್ರ ಉಚಿತ : ಬೆಸ್ಕಾಂ ಅಧಿಕಾರಿಗಳಿಂದ ಮನವರಿಕೆ

 

ಇನ್ನು ಭಾಗ್ಯಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಘೋಷಣೆಯಿದ್ದರೂ ಕೂಡ ಏಕೇ ನೋಟಿಸ್ ನೋಟಿಸ್ ಜಾರಿ ಮಾಡಿ ವಿದ್ಯುತ್ ಕಡಿತಗೊಳಿಸಿದ್ದರ ಬಗ್ಗೆ ಉತ್ತರಿಸಿದ ಬೆಸ್ಕಾಂ ಅಧಿಕಾರಿಗಳು, ಸರ್ಕಾರದಿಂದ ಭಾಗ್ಯಜ್ಯೋತಿ ವಿದ್ಯುತ್ ಸ್ಥಾವರಗಳಿಗೆ 40 ಯುನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ನೀಡುತ್ತಿದ್ದು, ಇದರಲ್ಲಿ ತಿಂಗಳಿಗೆ ಎರಡು ಬಲ್ಬಗಳನ್ನು ಮಾತ್ರ ಉರಿಸಬಹುದು.

ಆದರೆ ಭಾಗ್ಯಜ್ಯೋತಿ ಹೆಸರಿನಲ್ಲಿ ಜನರು ೪೦ ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಉರಿಸುತ್ತಿದ್ದು, ಟಿ ವಿ, ರೆಫ್ರಿಜರೇಟರ್, ಫ್ಯಾನ್ ಕೂಡ ಬಳಸುತ್ತಿದ್ದುಇದರಿಂದ 40 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಸಂಗ್ರಹವಾಗುತ್ತಿದ್ದು, 40 ಯುನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸಿದವರು ವಿದ್ಯುತ್ ಪಾವತಿ ಮಾಡಬೇಕಾಗುತ್ತದೆ. ಮತ್ತು ಹಳೆಯ ಬಾಕಿ ಕಟ್ಟದೆ ಹಾಗೆ ಉಳಿಸಿಕೊಂಡಿದ್ದು, ಇಂತವರು ವಿದ್ಯುತ್ ಪಾವತಿ ಮಾಡಬೇಕಾಗುತ್ತದೆ.

ಆದ್ದರಿಂದ ಭಾಗ್ಯಜ್ಯೋತಿ ವಿದ್ಯುತ್ ಸ್ಥಾವರವಿರುವ ಎಲ್ಲರು ಇರುವ ಹಳೆಯ ಬಾಕಿ ಕಟ್ಟಿ ೪೦ ಯುನಿಟ್ ವರೆಗೆ ಮಾತ್ರ ವಿದ್ಯುತ್ ಉರಿಸಬೇಕು. ಮನೆಯಲ್ಲಿ ಎರಡು ಬಲ್ಬ್ ಬಿಟ್ಟು, ಟಿ ವಿ, ರೆಫ್ರಿಜರೇಟರ್, ಫ್ಯಾನ್ ಬಳಸಬಾರದು. ಬಳಸಿದರೆ ಉರಿಸಿದ ವಿದ್ಯುತ್ ಗೆ ಬಿಲ್ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.