ಕರೋನ ಹಿನ್ನಲೆ : ದುರಗಮ್ಮದೇವಿ ಜಾತ್ರೋತ್ಸವ ಮುಂದೂಡಿದ ಗ್ರಾಮಸ್ಥರು

ಕುರೇಮಾಗನಹಳ್ಳಿ: ಅರಸೀಕೆರೆ ಹೋಬಳಿಯ ಕುರೇಮಾಗನಹಳ್ಳಿ ಗ್ರಾಮ ದೇವತೆ ದುರಗಮ್ಮದೇವಿ ಜಾತ್ರೋತ್ಸವವನ್ನು ಕರೋನ ಹೆಚ್ಚಳ ಹಿನ್ನೆಲೆ ಸ್ವಯಂಪ್ರೇರಿತರಾಗಿ ಗ್ರಾಮಸ್ಥರು ಮುಂದೂಡಿದ್ದಾರೆ. ಹೌದು,ಗ್ರಾಮದಲ್ಲಿ ಒಂಬತ್ತು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಆಚರಿಸುವ ದುರುಗಮ್ಮದೇವಿ ಜಾತ್ರೆಗೆ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದರು.…

ಕುರೇಮಾಗನಹಳ್ಳಿ: ಅರಸೀಕೆರೆ ಹೋಬಳಿಯ ಕುರೇಮಾಗನಹಳ್ಳಿ ಗ್ರಾಮ ದೇವತೆ ದುರಗಮ್ಮದೇವಿ ಜಾತ್ರೋತ್ಸವವನ್ನು ಕರೋನ ಹೆಚ್ಚಳ ಹಿನ್ನೆಲೆ ಸ್ವಯಂಪ್ರೇರಿತರಾಗಿ ಗ್ರಾಮಸ್ಥರು ಮುಂದೂಡಿದ್ದಾರೆ.

ಹೌದು,ಗ್ರಾಮದಲ್ಲಿ ಒಂಬತ್ತು ವರ್ಷಗಳಿಗೊಮ್ಮೆ ಅದ್ಧೂರಿಯಾಗಿ ಆಚರಿಸುವ ದುರುಗಮ್ಮದೇವಿ ಜಾತ್ರೆಗೆ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಜಾತ್ರೆಗೆ 15 ದಿನ ಬಾಕಿ ಇರುವಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಪರಿಣಾಮ, ದುರುಗಮ್ಮ ದೇವಿಯ ಜಾತ್ರೆ ಮುಂದೂಡಿದ್ದಾರೆ.

ಜಾತ್ರೆಯ ಸಾಂಪ್ರದಾಯಿಕ ಪರಂಪರೆಗಳನ್ನು ಕೈಬಿಡಬಾರದು ಎನ್ನುವ ನಂಬಿಕೆಯಿಂದ ದುರಗಮ್ಮದೇವಿ ದೇವಸ್ಥಾನಕ್ಕೆ ತೆರಳಿದ ಗ್ರಾಮಸ್ಥರು, ಸರಳವಾಗಿ ಉಡಿತುಂಬುವ ಕಾರ್ಯಕ್ರಮ ನಡೆಸಿದರು.

Vijayaprabha Mobile App free

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಪರಮೇಶ್ವರಪ್ಪ, ಮಂಜಮ್ಮ, ಮುಖಂಡರಾದ ಕೆ. ಎನ್. ಪ್ರಕಾಶ್, ಫಣಿಯಾಪುರ ಲಿಂಗರಾಜ, ಕೆಂಚವೀರಪ್ಪ, ರಾಘವೇಂದ್ರ, ವೀರೇಶ್, ತಳವಾರ ರಂಗಪ್ಪ, ಬಣಕಾರ ಬಸವರಾಜ, ವಿಜಯಕುಮಾರ್, ಆಲೂರು ಹನುಮಂತಪ್ಪ, ಮಂಜುನಾಥ ಇದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.