ವಿಜಯನಗರ: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಹಂಪಿಯ ಅಕ್ಕ-ತಂಗಿ ಗುಡ್ಡದ ಬಳಿಯ ಶಿವಾಲಯದ ಮಂಟಪ ಧರೆಗುರುಳಿದೆ.
ಹೌದು, ಇದು ಪ್ರಸನ್ನ ವಿರೂಪಾಕ್ಷೇಶ್ವರ ದೇಗುಲ ಎಂದೇ ಪ್ರಸಿದ್ಧಿ ಪಡೆದಿದ್ದು, ಇದೀಗ ಮಳೆಯಿಂದಾಗಿ ಈ ದೇಗುಲ ಮಂಟಪದ 3 ಕಂಬಗಳು ನೆಲಕ್ಕೆ ಉರುಳಿವೆ. ಜತೆಗೆ ಮಣ್ಣಿನ ತಡೆಗೋಡೆಯೂ ಬಿದ್ದಿದೆ.
ಇನ್ನು, ಪ್ರವಾಸಿಗರು ದೇಗುಲದ ಸೌಂದರ್ಯ ವೀಕ್ಷಿಸಲು ಸಾಧ್ಯವಾಗದೆ ಮರಳುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವಲಯದ ಅಧಿಕಾರಿಗಳು ಈ ಬಗ್ಗೆ ವರದಿ ಕೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.