ದಾವಣಗೆರೆ ಆ.30: ಮಾಯಕೊಂಡ ವಿಧಾನಸಭಾ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರಿಗೆ ಚರ್ಮವಸ್ತುಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಚರ್ಮ ಕುಶಲಕರ್ಮಿಗಳಿಗೆ ಲಿಡ್‍ಕರ್ ನಿಗಮದಿಂದ ವಸತಿ ಕಾರ್ಯಗಾರ, ಕಿರು ಆರ್ಥಿಕ ಸಾಲ ಯೋಜನೆ, ತರಬೇತಿ ಪಡೆದ ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ ಯೋಜನೆ, ಪಾದುಕೆ ಕುಟೀರ ಯೋಜನೆ, ದುಡಿಮೆ ಬಂಡವಾಳ ಯೋಜನೆ, ಸಂಚಾರಿ ಅಥವಾ ಸ್ವಾವಲಂಬಿ ಮಾರಾಟ ಮಳಿಗೆ ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತು ವಿವರವಾಗಿ ತಿಳಿಸಿ, ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಲಾಯಿತು.
ಇದೆ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸುರೇಶ್, ಹನುಮಂತಪ್ಪ ಲೋಕಿಕೆರೆ, ಅಂಜಿನಪ್ಪ ಆನಗೋಡು, ಲಿಡ್‍ಕರ್ ನಿಗಮದ ಜಿಲ್ಲಾ ಸಂಯೋಜಕರಾದ ರುದ್ರೇಶಿ ಸೇರಿದಂತೆ ತರಬೇತಾರ್ಥಿಗಳು ಭಾಗವಹಿಸಿದ್ದರು.