ಗಣಿಬಾಧಿತ ಪ್ರದೇಶಗಳು ಇದ್ದಲ್ಲಿ ಮಾಹಿತಿ ಸಲ್ಲಿಸಿ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್

ಹೊಸಪೇಟೆ(ವಿಜಯನಗರ),ಸೆ.03: ಗಣಿಬಾಧಿತ ಪ್ರದೇಶಗಳಿದ್ದಲ್ಲಿ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಮುಖ್ಯ ಖನಿಜ ಗಣಿ ಗುತ್ತಿಗೆಗಳು ಮತ್ತು ಉಪ ಖನಿಜ ಗಣಿ ಗುತ್ತಿಗೆಗಳ ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳನ್ನು…

vijayanagara-dc-anirudh-sharavan-vijayanagara-news

ಹೊಸಪೇಟೆ(ವಿಜಯನಗರ),ಸೆ.03: ಗಣಿಬಾಧಿತ ಪ್ರದೇಶಗಳಿದ್ದಲ್ಲಿ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಮುಖ್ಯ ಖನಿಜ ಗಣಿ ಗುತ್ತಿಗೆಗಳು ಮತ್ತು ಉಪ ಖನಿಜ ಗಣಿ ಗುತ್ತಿಗೆಗಳ ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳನ್ನು ಮತ್ತು ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನಾನುಷ್ಠಾನಕ್ಕಾಗಿ ಮುಖ್ಯ ಖನಿಜ ಗಣಿ ಗುತ್ತಿಗೆಗಳ ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳನ್ನು ಗುರುತಿಸುವ ಉದ್ದೇಶದಿಂದ ಗಣಿ ಬಾಧಿತ/ಗಣಿ ಅವಲಂಭಿತ ಜನವಸತಿ ನಿಲಯ/ಕ್ಯಾಂಪ್/ಕಾಲೋನಿ/ನಗರ/ಕುಗ್ರಾಮ/ಇತರೆ ಪ್ರದೇಶಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರು/ಸಂಘಸಂಸ್ಥೆಗಳು ನೇರವಾಗಿ ಹೊಸಪೇಟೆ ತಹಶೀಲ್ದಾರರ ಕಚೇರಿಗೆ ಅಥವಾ vijayanagaradc@gmail.comಗೆ ಇ-ಮೇಲ್ ಮೂಲಕ ತಿಳಿಸಬಹುದು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣಿ ಬಾಧಿತ ಪ್ರದೇಶಗಳ ಇದ್ದಲ್ಲಿ ಗಣಿ ಬಾಧಿತ ಪ್ರದೇಶದ ಹೆಸರು, ಕುಟುಂಬಗಳ ಸಂಖ್ಯೆ, ಒಟ್ಟು ಜನಸಂಖ್ಯೆ(ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಪ್ರತ್ಯೇಕವಾಗಿ), ಮೂಲಭೂತ ಸೌಕರ್ಯಗಳು(ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯಕೇಂದ್ರ, ರಸ್ತೆ, ಕುಡಿಯುವ ನೀರು, ಇತ್ಯಾದಿಗಳ ವಿವರ. ಕಂದಾಯ ಗ್ರಾಮದ ಹೆಸರು ಹಾಗೂ ಗ್ರಾಮ ಪಂಚಾಯಿತಿಯ ಹೆಸರು ಸೇರಿದಂತೆ ಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.