ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಆಧಾರ್ ಸೀಡಿಂಗ್ ಮಾಹಿತಿ ನೀಡಲು ಸೂಚನೆ

ವಿಜಯನಗರ ಜಿಲ್ಲೆ ಜ.25: 2020-21ನೇ ಸಾಲಿನಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಐಪಿಪಿಬಿ ಮತ್ತು ಆಧಾರ್ ಸೀಡಿಂಗ್ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಹೆಚ್.ಹೆಚ್.ನಡುವಿನಮನಿ ಅವರು…

scholarship vijayaprabha

ವಿಜಯನಗರ ಜಿಲ್ಲೆ ಜ.25: 2020-21ನೇ ಸಾಲಿನಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಐಪಿಪಿಬಿ ಮತ್ತು ಆಧಾರ್ ಸೀಡಿಂಗ್ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಹೆಚ್.ಹೆಚ್.ನಡುವಿನಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020-21ನೇ ಸಾಲಿನಲ್ಲಿ ಹೊಸಪೆಟೆ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ/ಶುಲ್ಕ ವಿನಾಯಿತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಸಂಬಂಧಿಸಿದ ಹಲವಾರು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮರುಪಾವತಿ ಹಣ ಮಂಜೂರಾಗಿರುತ್ತದೆ ಹಾಗೂ ಕಾಲೇಜಿನ ಬ್ಯಾಂಕ್ ಖಾತೆಗೆ ಜಮಾ ಆಗದೇ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಕೆಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವ/ಆಧಾರ್ ಮಿಸ್ ಮ್ಯಾಚ್ ಆಗಿರುವ ಕಾರಣ ಹಣ ಸಂದಾಯ ಸಂದಾಯವಾಗಿರುವುದಿಲ್ಲ.

ಆದ್ದರಿಂದ ಈ ಬಗ್ಗೆ ತುರ್ತಾಗಿ ತಮ್ಮ ಕಾಲೇಜಿಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಅವರವರ ಬ್ಯಾಂಕ್‍ಗಳನ್ನು ಸಂಪರ್ಕಿಸಿ ಅಥವಾ ಸಮೀಪದ ಪೋಸ್ಟ್ ಆಫೀಸ್‍ನಲ್ಲಿ ಅಥವಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಬಂದು ಮುಖಾಂತರ ಅಕೌಂಟ್ ತೆರೆದು ಆಧಾರ್ ಸೀಡ್,(ಎನ್‍ಪಿಸಿಐ ಮ್ಯಾಪಿಂಗ್) ಮಿಸ್ ಮ್ಯಾಚ್‍ಗಳನ್ನು ಜ.28ರೊಳಗಾಗಿ ಸರಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ.

Vijayaprabha Mobile App free

ತಪ್ಪಿದಲ್ಲಿ ಶುಲ್ಕ ಮರುಪಾವತಿ ಮಂಜೂರಾತಿ ಕಾರ್ಯಕ್ರಮದಿಂದ ನಿಮ್ಮ ಅರ್ಜಿಯನ್ನು ಖಾಯಂವಾಗಿ ಕೈಬಿಡಲಾಗುವುದು ಎಂದು ತಿಳಿಸಿರುವ ಅವರು ಇದು ಅಂತಿಮ ತಿಳುವಳಿಕೆಯಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.