ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ದಿನಾಚರಣೆ

ದಾವಣಗೆರೆ ಆ.30 : ಆ.29 ರಂದು ನಡೆದ ರಾಷ್ಟ್ರೀಯ ಕ್ರೀಡಾ ದಿನಾಚಣೆಯ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ನಾತಕ ಮತ್ತು ಸ್ನಾತಕೋತ್ತರ ಪದವಿ) ನಲ್ಲಿ ಕ್ರೀಡಾ ದಿನಾಚಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ…

Sports Day in Govt First Class College

ದಾವಣಗೆರೆ ಆ.30 : ಆ.29 ರಂದು ನಡೆದ ರಾಷ್ಟ್ರೀಯ ಕ್ರೀಡಾ ದಿನಾಚಣೆಯ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ನಾತಕ ಮತ್ತು ಸ್ನಾತಕೋತ್ತರ ಪದವಿ) ನಲ್ಲಿ ಕ್ರೀಡಾ ದಿನಾಚಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೂಡಾ ಅಧ್ಯಕ್ಷರಾದ ಕೆ.ಎಂ ಸುರೇಶ್ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅಂಜನಪ್ಪ ಎಸ್ .ಆರ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಆರ್ ನಾಗರಾಜ್ ರವರು ಆಗಮಿಸಿದ್ದರು.

ಈ ವೇಳೆ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೇಖಾ ಎಂ ಆರ್, ಪ್ರೊ. ನಾರಾಯಣಸ್ವಾಮಿ ಕೆ, ಗೀತಾದೇವಿ.ಟಿ, ಪತ್ರಾಂಕಿತ ವ್ಯವಸ್ಥಾಪಕರಾದ ಪ್ರೊ. ಗಿರಿಸ್ವಾಮಿ .ಎಚ್, ಪ್ರೊ. ಭೀಮಣ್ಣ ಸುಣಗಾರ, ಪ್ರೊ.ಸದಾಶಿವಪ್ಪ ಜಿ.ಸಿ, ಪ್ರೊ.ಜ್ಯೋತಿ ಟಿ.ಬಿ, ಪ್ರೊ.ಯಶೋಧ .ಆರ್, ಪ್ರೊ.ವೆಂಕಟೇಶ ಬಾಬು, ಪ್ರೊ. ಷಣ್ಮುಖ ಬಿ ಮತ್ತು ಬೋಧಕ /ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Vijayaprabha Mobile App free

ಆಗಮಿಸಿದ್ದ ಗಣ್ಯರು ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ ಮಾಡುವುದರ ಮೂಲಕ ಕ್ರೀಡಾ ದಿನಕ್ಕೆ ಹೊಸ ಮೆರುಗನ್ನು ತಂದರು. ವೆಂಕಟೇಶ್ .ಟಿ (ಕಬ್ಬಡಿ). ಮಲ್ಲಪ್ಪ ಬಿ. ಎಚ್, ಕಾಶೀನಾಥ್.ಬಿ, ಆಕಾಶ್ .ಡಿ. ವಾಣಿ ಎ.ಎನ್ (ಕುಸ್ತಿ). ಸುನಿಲ್ ಟಿ. (ಹಾಕಿ). ಸಾನಿಯಾ ಎಸ್ ಎಸ್ (ಕ್ರಾಸ್ ಕಂಟ್ರಿ). ಅಂಕುಶ್ ಪೂಜಾರ್, ಪ್ರಜ್ವಲ್ ಡಿ.ಕೆ , ಜಗದೀಶ್ ಆರ್ (ಟೇಬಲ್ ಟೆನ್ನಿಸ್). ಸಾನಿಯಾ ಎಸ್ ಎಸ್(ಅಥ್ಲೆಟಿಕ್). ನವೀನ್ ಸಿ.ಎಚ್, ಎಂ.ಕೆ ಅದಿಕ್‍ಬಾಲ್ (ಬ್ಯಾಡ್ಮಿಂಟನ್). ಮಹಾಂತೇಶ್ ಆರ್ , ರಮೇಶ್ ಜೆ (ಚೆಸ್). ಸೌಂದರ್ಯ ರಾಯ್ಕರ್, ಮುಕ್ತಿ, ಅನುಷಾ ಬಂಡಗರ್, ಅದಿತಿ ಯು, ಅನಿಲ್ ಕುಮಾರ್ ಆರ್.ಎಚ್ (ಪವರ್ ಲಿಫ್ಟಿಂಗ್). ಅನುಪ್ ಕುಮಾರ್ ಎಚ್.ಎಲ್ (ಕ್ರಿಕೆಟ್). ಪವನ್ ಕುಮಾರ್(ಬಾಡಿ ಬಿಲ್ಡಿಂಗ್) ಹಾಗೂ ವಿಶೇಷವಾಗಿ ಪವರ್ ಲಿಫ್ಟಿಂಗ್ ಕೋಚ್ ಆದ ಕಾರ್ತಿಕ್ ರವರನ್ನು ಸನ್ಮಾನಿಸಲಾಯಿತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.