ದಾವಣಗೆರೆ ಜು.15 :ಪ್ರತಿ ವರ್ಷದಂತೆ ಈ ವರ್ಷದಲ್ಲಿಯೂ ಜುಲೈ 17 ರಿಂದ ಪ್ರತಿ ಭಾನುವಾರ ಅಥವಾ ರಜಾ ದಿನಗಳಂದು ದಾವಣಗೆರೆ ಮತ್ತು ಹರಿಹರದಿಂದ ಶಿರಸಿ ಹಾಗೂ ವಿಶ್ವವಿಖ್ಯಾತ ಪ್ರೇಕ್ಷಣಿಯ ಸ್ಥಳವಾದ ಜೋಗಫಾಲ್ಸ್‍ಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಅಡಿಯಲ್ಲಿ ಪ್ರವಾಸ ಕೈಗೊಳ್ಳಲು ರಾಜಹಂಸ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಮಯ ಹಾಗೂ ಪ್ರಯಾಣ ದರದ ವಿವರ ಇಂತಿವೆ: ಬೆ.07 ಗಂಟೆಗೆ ದಾವಣಗೆರೆ ಶಿರಸಿ ಮಾರ್ಗವಾಗಿ ಜೋಗಫಾಲ್ಸ್‍ಗೆ ತಲುಪುವರು. ಮ.12 ಗಂಟೆಗೆ ಶಿರಸಿ ಯಿಂದ ಜೋಗ, ಸಂ.4.30ಕ್ಕೆ ಜೋಗ ದಿಂದ ದಾವಣಗೆರೆ ನೇರವಾಗಿ ಆಗಮಿಸಲಿದೆ.
ಪ್ರಯಾಣಿಕರ ದರ ರೂ.600/- ಮಕ್ಕಳಿಗೆ ರೂ.450/-(2 ಬದಿ ಸೇರಿ), ಹಾಗೂ ಬೆ.7.30ಕ್ಕೆ ಹರಿಹರದಿಂದ ಶಿರಸಿಗೆ, ಮ.12.30ಕ್ಕೆ ಶಿರಸಿ ಯಿಂದ ಜೋಗಕ್ಕೆ, ಸಂ.4.30ಕ್ಕೆ ಜೋಗದಿಂದ ಹರಿಹರಕ್ಕೆ ಬರುವ ವ್ಯವಸ್ಥೆ ಇದ್ದು, ನೇರ ಪ್ರಯಾಣಿಕರ ದರ ರೂ.575/- ಹಾಗೂ ಮಕ್ಕಳಿಗೆ ರೂ.430/- ಇರುತ್ತದೆ ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.