ತೊಗರಿ ಬೆಳೆಯಲ್ಲಿ ದಾವಣಗೆರೆ ರೈತರ ವಿಶೇಷ ಸಾಧನೆ: ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯಲ್ಲಿ ಮೂರೂ ಸ್ಥಾನ

ದಾವಣಗೆರೆ : ಕೃಷಿ ಇಲಾಖೆಯಲ್ಲಿ 2021-22 ನೇ ಸಾಲಿನ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಸರು ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿದ್ದರು ಅದರಲ್ಲಿ ಜಿಲ್ಲೆಯಿಂದ 10 ಜನ ರೈತರು…

Sorghum crop

ದಾವಣಗೆರೆ : ಕೃಷಿ ಇಲಾಖೆಯಲ್ಲಿ 2021-22 ನೇ ಸಾಲಿನ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಸರು ನೊಂದಾಯಿಸಿ ಸ್ಪರ್ಧೆಯಲ್ಲಿ ಭಾಗವಹಿದ್ದರು ಅದರಲ್ಲಿ ಜಿಲ್ಲೆಯಿಂದ 10 ಜನ ರೈತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅದರಂತೆ ತೊಗರಿ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಚನ್ನಗಿರಿಯ ಮಾದಾಪುರ ಗ್ರಾಮದ ವಿರುಪಾಕ್ಷಪ್ಪ, ದ್ವಿತೀಯ ಸ್ಥಾನ ಚನ್ನಗಿರಿಯ ನೀತಿಗೆರೆ ಗ್ರಾಮದ ವೀರಾಚಾರಿ ಮತ್ತು ತೃತಿಯ ಸ್ಥಾನವನ್ನು ಹರಿಹರದ ರಾಮತೀರ್ಥ ಗ್ರಾಮದ ಸೋಮಪ್ಪ ಎಸ್.ಎನ್ ಇವರು ಪಡೆದಿದ್ದಾರೆ.

ರಾಜ್ಯ ಮಟ್ಟದ ಮುಸುಕಿನ ಜೋಳ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆ ಯೋಜನೆಯಡಿ ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಗ್ರಾಮದ ರೈತರಾದ ರುದ್ರಪ್ಪ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶ ಕರು ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.